ಮಡಾಮಕ್ಕಿ: ಶಾಸಕ ಕೊಡ್ಗಿಯಿಂದ ರಸ್ತೆ ಸಮಸ್ಯೆ ಪರಿಶೀಲನೆ
Update: 2023-06-19 14:21 GMT
ಕುಂದಾಪುರ, ಜೂ.19: ಮಡಾಮಕ್ಕಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಂಜ, ಕಾರಿಮನೆ, ಎಡಮಲ್ಲಿಗೆ ಸರಿಯಾದ ರಸ್ತೆ ಸಂಪರ್ಕ ಇಲ್ಲದೆ ನೂರಾರು ವರ್ಷಗಳಿಂದ ತುಂಬ ತೊಂದರೆ ಅನುಭವಿಸುತ್ತಿದ್ದ ಗ್ರಾಮಸ್ಥರನ್ನು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಇಂದು ಭೇಟಿಯಾದರು.
ಇಲ್ಲಿನ ರಸ್ತೆ ಸಮಸ್ಯೆ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಕೂಡಲೇ ಸಮಸ್ಯೆಯನ್ನು ಪರಿಹರಿ ಸುವ ಭರವಸೆಯನ್ನು ಶಾಸಕರು ನೀಡಿದರು. ಮಡಾಮಕ್ಕಿ ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮಿ, ಪ್ರಮುಖರಾದ ಮಡಾ ಮಕ್ಕಿ ಎಂ. ಶಶಿಧರ ಶೆಟ್ಟಿ, ಎಂ.ಬಾಲಕೃಷ್ಣಶೆಟ್ಟಿ, ದಯಾನಂದ ಪೂಜಾರಿ, ಚಂದ್ರಶೇಖರ್ ಶೆಟ್ಟಿ ಬೆಳ್ವೆ, ವಿಜಯ ಕುಮಾರ್ ಶೆಟ್ಟಿ ಬೆಳ್ವೆ ಮತ್ತು ಅರಣ್ಯ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.