ವಿಜ್ಞಾನ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್ ವಿತರಣೆ

Update: 2024-01-12 15:46 GMT

ಬೆಂಗಳೂರು: ಸರಕಾರಿ ಶಾಲಾ ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿಗಳಿಗೂ ಆಧುನಿಕ ಉಪಕರಣಗಳನ್ನು ಬಳಸುವಂತಾಗಬೇಕು. ಆಗ ಶೈಕ್ಷಣಿಕ ಪ್ರಗತಿ ಸಾಧ್ಯ ಎಂದು ಲಂಡನ್ ಸ್ಟಾಕ್ ಎಕ್ಸ್ಚೇಂಜ್ ಗ್ರೂಪ್‍ನ ಸದಸ್ಯ ಶ್ರೀನಿವಾಸನ್ ಜಯಶಂಕರನ್ ಅಭಿಪ್ರಾಯಪಟ್ಟಿದ್ದಾರೆ.

ಶುಕ್ರವಾರ ನಗರದ ಮಲ್ಲೇಶ್ವರಂ 18ನೆ ಅಡ್ಡರಸ್ತೆಯ ಸರಕಾರಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್‍ಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೇರವಾಗುವ ಉದ್ದೇಶದಿಂದ ಸರಕಾರಿ ಶಾಲೆಯ 141 ವಿದ್ಯಾರ್ಥಿಗಳಿಗೆ ಟ್ಯಾಬ್ ನೀಡಲಾಗುತ್ತಿದೆ. ಇದು ತಳ ಮಧ್ಯಮ ವರ್ಗದ ವಿದ್ಯಾರ್ಥಿಗಳು ಕಲಿಕೆಯಲ್ಲಿ ಮುಂದುವರಿಯಲು ಸಹಕರಿಸುತ್ತದೆ. ಟ್ಯಾಬ್‍ಗಳಲ್ಲಿ ವಿಜ್ಞಾನ ವಿಭಾಗದ ಪಾಠಗಳಿಗೆ ಹಾಗೂ ನೀಟ್, ಜೆಇಇ ಪರೀಕ್ಷೆಗಳಿಗೆ ನೇರವಾಗುವ ಆಪ್‍ಗಳನ್ನು ಇಸ್ಟಾಲ್ ಮಾಡಿ ಪರೀಕ್ಷೆಗೆ ಸಿದ್ಧರಾಗಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಹೇಳಿದರು.

ಕಾರ್ಯಕ್ರಮದಲ್ಲಿ ಲಂಡನ್ ಸ್ಟಾಕ್ ಎಕ್ಸ್ಚೇಂಜ್ ಗ್ರೂಪ್‍ನ ದಯಾಳ್, ನಾಗರಾಜ್, ಉಮೇಶ್ ನಿರಂಜನ, ಕಲೈನಾಥ್, ಮಂಜುನಾಥ್ ಮಾದಯ್ಯ, ಬೈಜೂಸ್ ಸಂಸ್ಥೆ ಹಾಗೂ ಅಕ್ಷಯ ಪಾತ್ರೆ ಸಂಸ್ಥೆಯ ಪ್ರತಿನಿಧಿಗಳು ಇದ್ದರು. ಪ್ರಾಂಶುಪಾಲ ರತ್ನಾಕರ ಶೆಟ್ಟಿ, ಉಪನ್ಯಾಸಕ ಸುಧಾ ಫತೆಪುರ್, ಶಶಿಕಲಾ, ಉಮಾಕಾಂತ್, ಶಂಕರಪ್ಪ, ನಾರಾಯಣ ಸ್ವಾಮಿ, ವಿಶಾಲ, ವೀರಬಸಪ್ಪ, ಕೆಂಪೇಗೌಡ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News