ʼತಲಾಶ್-24ʼ ಸಾಂಸ್ಕೃತಿಕ ಕಲೆಗೆ ಸಿಲಿಕಾನ್ ಸಿಟಿಯಲ್ಲಿ ಪ್ರೌಢ ಸಮಾಪ್ತಿ

Update: 2024-10-06 16:25 GMT

ಬೆಂಗಳೂರು : ‘ಕ್ವೆಸ್ಟ್ ಫೌಂಡೇಶನ್’ ವತಿಯಿಂದ ಪ್ರತಿವರ್ಷ ನಡೆಯುವ ಮಕ್ಕಳ ಸಾಂಸ್ಕೃತಿಕ ಕಲಾ ಕಾರ್ಯಕ್ರಮ ತಲಾಶ್-24 ಬೆಂಗಳೂರಿನ ಬ್ಯಾರೀಸ್ ಅಮಿಟಿ ಭವನದಲ್ಲಿ ರವಿವಾರ ಪ್ರೌಢ ಸಮಾಪ್ತಿಗೊಂಡಿತು.

ಮೂವತ್ತೈದಕ್ಕೂ ಹೆಚ್ಚು ವಿಭಿನ್ನ ಕಲಾ ಕಾರ್ಯಕ್ರಮದಲ್ಲಿ ಅನಂತಪುರ, ಗದಗ, ಕೋಲಾರದ, ಇನ್ನೂರರಷ್ಟು ಮಕ್ಕಳು ಪಾಲ್ಗೊಂಡಿದ್ದರು. ಅನಂತಪುರ ಝೋನ್ ಚಾಂಪಿಯನ್ ಪಟ್ಟ ಪಡೆದರೆ ಗದಗ ರನ್ನರ್ ಆಪ್‍ಗೆ ತೃಪ್ತಿಪಟ್ಟಿತು.

ರಾತ್ರಿ ಏಳು ಗಂಟೆಗೆ ಕ್ವೆಸ್ಟ್ ಡೈರಕ್ಟರ್ ಜನರಲ್ ಸಯ್ಯಿದ್ ಮಿದ್ಲಾಜ್ ಬಾಅಲವಿ ಅಲ್ ಖಾದಿರಿಯವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಡಾ.ಯು.ಟಿ.ಇಫ್ತಿಕಾರ್ ಅಲಿ ಉದ್ಘಾಟನಾ ಭಾಷಣ ಮಾಡಿದರು.

ಕ್ವೆಸ್ಟ್ ಸ್ಥಾಪಕರಾದ ಜಾಫರ್ ನೂರಾನಿ ಪ್ರಾಸ್ತಾವಿಕ ಭಾಷಣ ಮಾಡಿದರೆ, ಹಲವು ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕೊನೆಗೆ ಗಣ್ಯರಿಗೆ ಸನ್ಮಾನ ಮಾಡಲಾಯಿತು. ಭವಿಷ್ಯದಲ್ಲಿ ಶೈಕ್ಷಣಿಕ, ಸಾಮಾಜಿಕವಾಗಿ ಮಾಡಬೇಕಾದ ಬದಲಾವಣೆಯ ಕುರಿತು ಸಮಾಜದ ಗಣ್ಯರು ತಮ್ಮ ಅಭಿಪ್ರಾಯ ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News