ಬೆಂಗಳೂರು | ಅಮಾನ್ಯಗೊಂಡ ನೋಟುಗಳ ವಿಲೇವಾರಿಗೆ ಕೋರ್ಟ್ ಅನುಮತಿ ಪಡೆಯಲು ಮುಂದಾದ ಪೊಲೀಸರು

Update: 2024-10-06 13:58 GMT

ಸಾಂದರ್ಭಿಕ ಚಿತ್ರ

ಬೆಂಗಳೂರು : ವಿವಿಧ ಪ್ರಕರಣಗಳಲ್ಲಿ ಜಪ್ತಿ ಮಾಡಿಕೊಂಡಿರುವ 5 ಕೋಟಿ ರೂ.ಗೂ ಅಧಿಕ ಮೌಲ್ಯದ ಅಮಾನ್ಯಗೊಂಡ ಹಳೆಯ ನೋಟುಗಳ ವಿಲೇವಾರಿಗೆ ನ್ಯಾಯಾಲಯದ ಅನುಮತಿ ಕೋರಲು ನಗರ ಪೊಲೀಸರು ಮುಂದಾಗಿದ್ದಾರೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಹ ಸ್ವೀಕರಿಸದ ಹಳೆಯ 500 ರೂ.ಹಾಗೂ 1000 ರೂ. ಮುಖಬೆಲೆಯ 5 ಕೋಟಿ ರೂ.ಗೂ ಅಧಿಕ ಮೌಲ್ಯದ ಹಣವನ್ನು ವಿಲೇವಾರಿ ಮಾಡಲು ಅನುಮತಿ ನೀಡುವಂತೆ ನ್ಯಾಯಾಲಯದ ಮೊರೆ ಹೋಗಲು ಪೊಲೀಸರು ಸಿದ್ಧತೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.

ಕೇಂದ್ರ ಸರಕಾರ 2016ರಲ್ಲಿ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಗೊಳಿಸಿತ್ತು. ಆದರೆ, ವಿವಿಧ ಪ್ರಕರಣಗಳಲ್ಲಿ 5 ಕೋಟಿ ರೂ.ಗೂ ಅಧಿಕ ಮೌಲ್ಯದ ಅಮಾನ್ಯಗೊಂಡ ಹಳೆಯ ನೋಟುಗಳು ಬೆಂಗಳೂರು ಪೊಲೀಸರ ಬಳಿಯಿದೆ. ಈ ನೋಟುಗಳು ನಿಷೇಧಗೊಂಡಿರುವುದರಿಂದ ಈ ಹಣವನ್ನು ಬ್ಯಾಂಕ್‍ನಲ್ಲಿ ಡೆಪಾಸಿಟ್ ಮಾಡಲು ಸಾಧ್ಯವಾಗುತ್ತಿಲ್ಲ.

ಮತ್ತೊಂದೆಡೆ ನೋಟುಗಳ ವಿನಿಮಯಕ್ಕೆ ನೀಡಿದ್ದ ಗಡುವು ಸಹ ಮುಗಿದಿರುವುದರಿಂದ ರಿಸರ್ವ್ ಬ್ಯಾಂಕ್ ಸಹ ಈ ನೋಟುಗಳನ್ನು ಸ್ವೀಕರಿಸುತ್ತಿಲ್ಲ. ಇದರಿಂದ ಈ ಹಣವನ್ನು ವಿಲೇವಾರಿ ಮಾಡುವುದು ಹೇಗೆ ಎಂಬ ಪ್ರಶ್ನೆ ಪೊಲೀಸರ ಮುಂದೆ ಉದ್ಭವವಾಗಿದೆ. ಹೀಗಾಗಿಯೇ ನೋಟುಗಳ ವಿಲೇವಾರಿಗೆ ನ್ಯಾಯಾಲಯದ ಅನುಮತಿಯನ್ನು ಪೆÇಲೀಸರು ಕೇಳಲಿದ್ದಾರೆ ಎಂದು ಗೊತ್ತಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News