ಬೆಂಗಳೂರು | ಚೀಟಿ ವ್ಯವಹಾರದಲ್ಲಿ ವಂಚನೆ ಆರೋಪ : ದಂಪತಿ ಸೇರಿ ಮೂವರ ಬಂಧನ

Update: 2024-10-06 14:22 GMT

ಸಾಂದರ್ಭಿಕ ಚಿತ್ರ (Meta AI)

ಬೆಂಗಳೂರು : ಚೀಟಿ ವ್ಯವಹಾರದಲ್ಲಿ ಲಕ್ಷಾಂತರ ರೂ. ವಂಚಿಸಿದ ಆರೋಪದಡಿ ದಂಪತಿ ಸೇರಿ ಮೂವರನ್ನು ಇಲ್ಲಿನ ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಕಾಡುಗೋಡಿಯ ಬೆಳತೂರಿನಲ್ಲಿ ವಾಸವಾಗಿದ್ದ ಮಹದೇವಮ್ಮ, ಪತಿ ಚಂದ್ರಶೇಖರ್ ಹಾಗೂ ಪುತ್ರ ಸಾಗರ್ ಎಂಬುವರನ್ನು ಬಂಧಿಸಿ, ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಲಕಾಡು ಮೂಲದ ಮಹದೇವಮ್ಮ ಕುಟುಂಬ 10 ವರ್ಷಗಳಿಂದ ಬೆಳತೂರಿನ ಬಾಡಿಗೆ ಮನೆಯಲ್ಲಿ ವಾಸವಾಗಿತ್ತು. ಚಂದ್ರಶೇಖರ್ ಟಿವಿ ರಿಪೇರಿ ಕೆಲಸ ಮಾಡುತ್ತಿದ್ದರೆ, ಪತ್ನಿ ಗೃಹಿಣಿಯಾಗಿ ಚೀಟಿ ವ್ಯವಹಾರ ನಡೆಸುತ್ತಿದ್ದರು. 1 ರಿಂದ 10 ಲಕ್ಷ ರೂಪಾಯಿವರೆಗೆ ಚೀಟಿ ನಡೆಸುತ್ತಿದ್ದ ಮಹದೇವಮ್ಮ ಚೀಟಿ ಹಣ ತೆಗೆದುಕೊಂಡು ರಾತ್ರೋರಾತ್ರಿ ಪರಾರಿಯಾಗಿದ್ದರು. ಹಣ ಕಳೆದುಕೊಂಡವರು ನೀಡಿದ ದೂರಿನ ಮೇರೆಗೆ ಆರೋಪಿತರನ್ನು ಮೈಸೂರಿನಲ್ಲಿ ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಹಲವು ವರ್ಷಗಳಿಂದ ಚೀಟಿ ವ್ಯವಹಾರ ನಡೆಸುತ್ತಿದ್ದ ಮಹದೇವಮ್ಮ ಫೆಬ್ರವರಿಯಿಂದಲೂ ವಿವಿಧ ಕಾರಣಗಳನ್ನು ನೀಡಿ ಚೀಟಿ ಎತ್ತಲು ಅನುವು ಮಾಡಿಕೊಟ್ಟಿರಲಿಲ್ಲ. ಹಿಂದಿನ ಎರಡು ತಿಂಗಳ ಹಿಂದೆ ರಾತ್ರೋರಾತ್ರಿ ಮನೆ ಖಾಲಿ ಮಾಡಿಕೊಂಡಿದ್ದ ಮಹದೇವಮ್ಮ ಚೀಟಿದಾರರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಸದ್ಯ ಬಂಧಿತ ಆರೋಪಿಗಳನ್ನು ಹೆಚ್ಚಿನ ತನಿಖೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News