ನಕಲಿ ಬಿಲ್ ಸೃಷ್ಟಿಸಿ 180 ಕೋಟಿ ರೂ. ವಂಚನೆ ಪ್ರಕರಣ: ಆರೋಪಿ ಸೆರೆ

Update: 2024-01-19 14:37 GMT

ಬೆಂಗಳೂರು: ಸರಕಾರಕ್ಕೆ ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್‍ಟಿ) ಪಾವತಿಸದಿದ್ದರೂ ಪಾವತಿಸಿದ ತೆರಿಗೆ ಹಿಂಪಡೆಯುವ ಸೌಲಭ್ಯ ಬಳಸಿಕೊಂಡು ನಕಲಿ ಬಿಲ್‍ಗಳ ಮೂಲಕ 180 ಕೋಟಿ ರೂ. ವಂಚಿಸಿದ್ದ ಪ್ರಕರಣವನ್ನು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಪತ್ತೆ ಮಾಡಿದ್ದು, ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಿರುವುದು ವರದಿಯಾಗಿದೆ.

ಬಂಧಿತನನ್ನು ಕೇರಳ ಮೂಲದ ಮೊಹಮ್ಮದ್ ಸಿದ್ದಿಕ್ ಎಂದು ಗುರುತಿಸಲಾಗಿದೆ. ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನಲ್ಲಿ 100ಕ್ಕೂ ಹೆಚ್ಚು ಜಿಎಸ್‍ಟಿ ಬೋಗಸ್ ನೋಂದಣಿ ಪ್ರಕರಣಗಳು ಪತ್ತೆಯಾಗಿದ್ದು, 1,008 ಕೋಟಿ ರೂ. ಮೊತ್ತದ ನಕಲಿ ಬಿಲ್‍ಗಳನ್ನು ಸೃಷ್ಟಿಸಿ, ಸುಮಾರು 180 ಕೋಟಿ ರೂ.ಗಳಷ್ಟು ಕಾನೂನುಬಾಹಿರ ಹೂಡುವಳಿ ತೆರಿಗೆ ಪಡೆದುಕೊಂಡು ಸರಕಾರಕ್ಕೆ ತೆರಿಗೆ ನಷ್ಟ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಹಲವರ ಖಾತೆಗಳಿಗೆ ಈ ಹಣವನ್ನು ಮರಳಿ ಜಮೆ ಮಾಡಲಾಗಿತ್ತು. ಈ ವಂಚನೆ ಪ್ರಕರಣದ ಪತ್ತೆ ಕಾರ್ಯಾಚರಣೆಯಲ್ಲಿ ರಾಜ್ಯದ 60 ಅಧಿಕಾರಿಗಳು ಭಾಗವಹಿಸಿದ್ದರು. ಕೇರಳ, ತಮಿಳುನಾಡು ರಾಜ್ಯಗಳ ಜಿಎಸ್‍ಟಿ ಅಧಿಕಾರಿಗಳ ಸಹಯೋಗದಲ್ಲಿ ಎರಡು ದಿನಗಳ ಕಾಲ ಈ ಕಾರ್ಯಾಚರಣೆ ನಡೆದಿದೆ ಎಂದು ಸಿ.ಶಿಖಾ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News