ಅ.28ರಂದು ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ಪ್ರದಾನ

Update: 2024-10-25 16:56 GMT

ಸಾಂದರ್ಭಿಕ ಚಿತ್ರ

ಬೆಂಗಳೂರು : ಬೆಂಗಳೂರು ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯ ವತಿಯಿಂದ ಅ.28ರಂದು ಸಂಜೆ 6ಗಂಟೆಗೆ ನಗರದ ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ 2023-24 ಮತ್ತು 2024-25ನೇ ಸಾಲಿನ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್.ಎಸ್ ತಂಗಡಗಿ ಸಮಾರಂಭದ ಉದ್ಘಾಟನೆ ನೆರವೇರಿಸಿ, ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಸಂಸದ ಪಿ.ಸಿ.ಮೋಹನ್ ಅವರು ಪ್ರಶಸ್ತಿ ಪುರಸ್ಕೃತರ ಪರಿಚಯ ಪುಸ್ತಕವನ್ನು ಬಿಡುಗಡೆ ಮಾಡಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಡಾ. ಅಜಯ್ ನಾಗಭೂಷಣ್ ಎಂ.ಎನ್ ಮತ್ತು ನಿರ್ದೇಶಕರಾದ ಡಾ.ಧರಣೀದೇವಿ ಮಾಲಗತ್ತಿ ಉಪಸ್ಥಿತರಿರುತ್ತಾರೆ.

ಅಧ್ಯಕ್ಷತೆಯನ್ನು ಶಾಸಕ ಉದಯ್ ಬಿ.ಗರುಡಾಚಾರ್ ವಹಿಸಲಿದ್ದು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷೆ ಶುಭಾ ಧನಂಜಯ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾರೆ ಎಂದು ಪ್ರಕಟನೆ ತಿಳಿಸಿದೆ.

ಪ್ರಶಸ್ತಿ ಪುರಸ್ಕೃತರು: 2023-24ನೆ ಸಾಲಿನಲ್ಲಿ ಹಿಂದೂಸ್ಥಾನಿ ಸಂಗೀತ–ಗಾಯನದಲ್ಲಿ ಬಳ್ಳಾರಿಯ ಡಿ ಕುಮಾರದಾಸ್, ಸುಗಮ ಸಂಗೀತದಲ್ಲಿ ರಾಯಚೂರಿನ ಅಂಜಯ್ಯ ನುಲಿ ಅವರು ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿಗೆ ಪಡೆದಿದ್ದು, ಕರ್ನಾಟಕ ಸಂಗೀತ ವಿಭಾಗದಲ್ಲಿ ಹಾಡುಗಾರಿಕೆಯಲ್ಲಿ ಬೆಂಗಳೂರಿನ ಪದ್ಮಾ ಗುರುದತ್, ವೀಣೆಯಲ್ಲಿ ಮೈಸೂರಿನ ರೇವತಿ ಕಾಮತ್, ನಾದಸ್ವರದಲ್ಲಿ ಕೋಲಾರದ ವಿ.ರಮೇಶ್, ಕ್ಯಾಕ್ಸೋಪೋನ್‍ನಲ್ಲಿ ಮಂಗಳೂರಿನ ಕದ್ರಿ ರಮೇಶ್‍ನಾಥ್ ‘ಕರ್ನಾಟಕ ಕಲಾಶ್ರೀ’ ವಾರ್ಷಿಕ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

ಹಿಂದೂಸ್ಥಾನಿ ಸಂಗೀತ ಗಾಯನದಲ್ಲಿ ಕೊಪ್ಪಳದ ವಿರೂಪಾಕ್ಷ ರೆಡ್ಡಿ, ಸಿತಾರ-ಧಾರವಾಡದ ಶಫೀಕ್ ಖಾನ್, ತಬಲ-ಹುಬ್ಬಳಿಯ ಸತೀಶ್ ಹಂಪಿಹೋಳಿ ಅವರು ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ನೃತ್ಯ- ಅರುಣ, ಮಾಲಾ ಶಶಿಕಾಂತ್, ಒಡಿಸ್ಸಿ- ಶರ್ಮಿಳಾ ಮುಖರ್ಜಿ, ಆನೇಕಲ್‍ನ ಸೈಯದ್ ಸಲ್ಲಾವುದ್ದೀನ್ ಪಾಷಾ, ಸುಗಮ ಸಂಗೀತ- ಬೆಂಗಳೂರಿನ ಆನಂದ ಮಾದಲಗೆರೆ, ಕಥಾಕೀರ್ತನ-ಮಂಡ್ಯದ ಎಸ್.ಎಂ.ನಾಗಾರಾಜಾಚಾರ್, ಗಮಕ-ವಾಚನ ಜಿ.ಎಸ್.ನಾರಾಯಣ, ಹೊರದೇಶ ಕನ್ನಡ ಕಲಾವಿದರಿಂದ ಭರತನಾಟ್ಯದಲ್ಲಿ ಅಮೇರಿಕಾದ ಕೆ.ಆರ್.ಎಸ್. ಪ್ರಸನ್ನ ಕಸ್ತೂರಿ, ಸಂಘ ಸಂಸ್ಥೆ ವಿಭಾಗದಿಂದ ಬೆಂಗಳೂರಿನ ವಾಣಿ ಸ್ಕೂಲ್ ಎಜುಕೇಶನ್ ಟ್ರಸ್ಟ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

2024-25ನೇ ಸಾಲಿನಲ್ಲಿ ಕರ್ನಾಟಕ ಸಂಗೀತ ಗಾಯನ ವಿಭಾಗದಿಂದ ಶ್ರೀಮತಿ ಭಾನುಮತಿ ನರಸಿಂಹನ್ ಹಾಗೂ ನೃತ್ಯ ಗುರು ವಿಭಾಗದಿಂದ ಹಾಸನದ ಶ್ರೀಮತಿ ಗಾಯತ್ರಿ ಕೇಶವನ್ ಅವರುಗಳು ಕರ್ನಾಟಕ ಕಲಾಶ್ರೀ ಗೌರವ ಪ್ರಶಸ್ತಿ ಪುರಸ್ಕೃತರಾಗಿದ್ದರೆ, ಕರ್ನಾಟಕ ಸಂಗೀತ ವಿಭಾಗದಿಂದ ಹಾಡುಗಾರಿಕೆಯಲ್ಲಿ ಕೋಲಾರದ ವಾನರಾಶಿ ಬಾಲಕೃಷ್ಣ ಭಾಗವತ್, ಮೃದಂಗದಲ್ಲಿ ಬೆಂಗಳೂರಿನ ಎಸ್.ವಿ.ಗಿರಿಧರ್, ಪಿಟೀಲು - ಹೊಸಕೋಟೆಯ ಕೆ.ಎಸ್.ನಾಗಭೂಷಣಯ್ಯ ಅವರು ಕರ್ನಾಟಕ ಕಲಾಶ್ರೀ ವಾರ್ಷಿಕ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

ಹಿಂದೂಸ್ತಾನಿ ವಿಭಾಗದಿಂದ ಗಾಯನ-ಕಲಬುರಗಿಯ ಮಹದೇವಪ್ಪ ಪೂಜಾರ್, ಹಾರ್ಮೋನಿಯಂ - ಬೆಳಗಾವಿಯ ರವೀಂದ್ರ ಗುರುರಾಜ ಕಾಟೋಟಿ, ಗಾಯನ-ಉತ್ತರಕನ್ನಡ ಆನಂದ್ ಭಾಗವತ್, ನೃತ್ಯ ವಿಭಾಗದಲ್ಲಿ ಬೆಳಗಾವಿಯ ಟಿ.ರವೀಂದ್ರ ಶರ್ಮ, ಬೆಂಗಳೂರಿನ ಅನುರಾಧ ವಿಕ್ರಾಂತ್, ಬೆಂಗಳೂರಿನ ಸುಗ್ಗನಹಳ್ಳಿ ಷಡಕ್ಷರಿ, ನೃತ್ಯ ಪಿಟೀಲು-ಬೆಂಗಳೂರಿನ ಟಿ.ಆರ್.ಹೇಮಂತ್‍ಕುಮಾರ್, ಸುಗಮ ಸಂಗೀತದಲ್ಲಿ ರಾಯಚೂರಿನ ಸೂಗೂರೇಶ ಅಸ್ಕಿಹಾಳ್, ಪಕ್ಕವಾದ್ಯ-ತಬಲ ಬೆಂಗಳೂರಿನ ಎಸ್‍ಎಲ್.ಶಿವಶಂಕರ್, ಕಥಾಕೀರ್ತನ ವಿಭಾಗದಿಂದ ಕೋಲಾರದ ಕೆ.ಎನ್.ಕೃಷ್ಣಪ್ಪ, ಗಮಕ ವಿಭಾಗದಿಂದ ವಾಖ್ಯಾನ-ಹಾಸನದ ಶ್ರೀಮತಿ ರತ್ನಮೂರ್ತಿ ಹಾಗೂ ಸಂಘಸಂಸ್ಥೆಯ ವಿಭಾಗದಿಂದ ಗದಗದ ಶ್ರೀ ವೀರೇಶ್ವರ ಪುಣ್ಯಾಶ್ರಮ ಮತ್ತು ಬೆಂಗಳೂರಿನ ಸುನಾದ ನಾದ ಸೆಂಟರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News