390 ಕೋಟಿ ರೂ. ಆಸ್ತಿ ತೆರಿಗೆ ಪಾವತಿ ಬಾಕಿ ಉಳಿಸಿಕೊಂಡ 3.49 ಲಕ್ಷ ಮಂದಿ : ಬಿಬಿಎಂಪಿ

Update: 2025-03-23 21:52 IST
390 ಕೋಟಿ ರೂ. ಆಸ್ತಿ ತೆರಿಗೆ ಪಾವತಿ ಬಾಕಿ ಉಳಿಸಿಕೊಂಡ 3.49 ಲಕ್ಷ ಮಂದಿ : ಬಿಬಿಎಂಪಿ
  • whatsapp icon

ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ 3.49 ಲಕ್ಷ ನಾಗರಿಕರಿಂದ 390 ಕೋಟಿ ರೂ.ಗಳ ಆಸ್ತಿ ತೆರಿಗೆ ಪಾವತಿ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಮಾಹಿತಿ ನೀಡಿದ್ದಾರೆ.

ರವಿವಾರ ಪ್ರಕಟನೆ ಹೊರಡಿಸಿರುವ ಅವರು, ಬಿಬಿಎಂಪಿ ವ್ಯಾಪ್ತಿಯ 20.5 ಲಕ್ಷ ಜನ ಆಸ್ತಿ ತೆರಿಗೆದಾರರಾಗಿದ್ದಾರೆ. ಆಸ್ತಿ ತೆರಿಗೆಯನ್ನು ಪಾವತಿಸದ 3.49 ಲಕ್ಷ ನಾಗರಿಕರ ಪೈಕಿ, 1.73 ಲಕ್ಷ ಜನರು ದೀರ್ಘಕಾಲದ ಸುಸ್ತಿದಾರರು ಮತ್ತು 1.76 ಲಕ್ಷ ಜನರು ಪ್ರಸ್ತುತ ವರ್ಷದ ಸುಸ್ತಿದಾರರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಆಸ್ತಿ ತೆರಿಗೆಯನ್ನು ಪಾವತಿಸದವರಿಗೆ ನೋಟಿಸ್‍ಗಳು, ಸಂದೇಶಗಳು, ಐವಿಆರ್‍ಎಸ್ ಕರೆಗಳು, ವೈಯಕ್ತಿಕ ಕರೆಗಳು, ಮುಟ್ಟುಗೋಲು ನೋಟೀಸ್‍ಗಳು ಕಳುಹಿಸಲಾಗಿದೆ. ಆದರೂ ದೀರ್ಘಕಾಲದ ಸುಸ್ತಿದಾರರು ತೆರಿಗೆ ಪಾವತಿಸಿಲ್ಲ.

ಒಂದು ಬಾರಿ ಪರಿಹಾರ ಯೋಜನೆ(ಒಟಿಎಸ್) ಅನ್ನು ಸಹ ಪಡೆಯದೇ ಉದ್ದೇಶಪೂರ್ವಕವಾಗಿ ದೀರ್ಘಕಾಲದ ಸುಸ್ತಿದಾರರಾಗಿದ್ದಾರೆ. ಹಲವು ವರ್ಷಗಳಿಂದ ಆಸ್ತಿ ತೆರಿಗೆಯನ್ನು ಪಾವತಿಸಿಲ್ಲ. ಇಂತಹ ನಾಗರಿಕರನ್ನು ಬಿಟ್ಟುಕೊಡುವುದು ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ಸಂಪೂರ್ಣವಾಗಿ ಅನ್ಯಾಯ ಮಾಡಿದಂತಾಗುವುದು. ಹೀಗಾಗಿ ಬಿಬಿಎಂಪಿಯು ಕಾನೂನಾತ್ಮಕವಾಗಿ ಆಸ್ತಿ ತೆರಿಗೆಯನ್ನು ಸಂಗ್ರಹಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News