ಬೆಂಗಳೂರು ವಿಶ್ವವಿದ್ಯಾಲಯಕ್ಕೆಅಮೇರಿಕಾದ ಅವ್ಬರ್ನ್ ವಿವಿ ಪ್ರಾಧ್ಯಾಪಕರ ತಂಡ ಭೇಟಿ

Update: 2024-01-22 15:46 GMT

ಬೆಂಗಳೂರು: ಅಮೇರಿಕಾ ದೇಶದ ಅವ್ಬರ್ನ್ ವಿಶ್ವ ವಿದ್ಯಾನಿಲಯದ 4 ಜನ ಪ್ರಾಧ್ಯಾಪಕರ ತಂಡ ಬೆಂಗಳೂರು ನಗರ ವಿಶ್ವ ವಿದ್ಯಾಲಯಕ್ಕೆ ಸೋಮವಾರ ಭೇಟಿ ನೀಡಿ, ವಿಭಾಗಗಳ ಮುಖ್ಯಸ್ಥರೊಂದಿಗೆ ಎರಡೂ ವಿವಿಗಳು ಹೊಂದಬಹುದಾದ ಶೈಕ್ಷಣಿಕ ಒಡಂಬಡಿಕೆಯ ಕುರಿತು ಚರ್ಚೆ ನಡೆಸಿತು.

ವಿವಿಯ ಕುಲಪತಿ ಪ್ರೊ. ಲಿಂಗರಾಜಗಾಂಧಿ ಬೆಂಗಳೂರು ನಗರ ವಿಶ್ವ ವಿದ್ಯಾಲಯದ ಗತವೈಭವ ವಿಶ್ವವಿದ್ಯಾನಿಲಯದ ಪ್ರಾರಂಭ, ವಿವಿಧ ವಿಭಾಗಗಳಲ್ಲಿ ಲಭ್ಯವಿರುವ ಪದವಿ ವ್ಯಾಸಂಗಗಳ ವಿವರ, ವಿಶ್ವವಿದ್ಯಾನಿಲಯದಲ್ಲಿ ಪದವಿ ವ್ಯಾಸಂಗ ಪ್ರಾರಂಭ, ವಿದ್ಯಾರ್ಥಿಗಳ ಪ್ರವೇಶ, ಸಂಶೋಧನೆ, ಮುಂತಾದ ವಿಷಯಗಳ ಕುರಿತು ತಂಡಕ್ಕೆ ವಿವರ ನೀಡಿದರು.

ವಿದೇಶಿ ಪ್ರತಿನಿಧಿಗಳ ತಂಡ, ಬೆಂಗಳೂರು ನಗರ ವಿಶ್ವ ವಿದ್ಯಾಲಯದಲ್ಲಿನ ವಿವಿಧ ಕೋರ್ಸುಗಳು ಹಾಗೂ ಇದರ ಐತಿಹಾಸಿಕ ಹಿನ್ನೆಲೆಯ ಕುರಿತು ಪ್ರಭಾವಿತರಾಗಿ ಪರಸ್ಪರ ಸಹಯೋಗ ಹೊಂದುವ ಕುರಿತು ಆಸಕ್ತಿ ತೋರಿಸಿ ಚರ್ಚೆಯನ್ನು ಮುಂದಿನ ಘಟ್ಟಕ್ಕೆ ಕೊಂಡೊಯ್ಯುವ ಭರವಸೆ ವ್ಯಕ್ತಪಡಿಸಿದ್ದಾರೆ ಎಂದು ವಿವಿಯ ಕುಲಸಚಿವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News