ಕೆಪಿಸಿಸಿಗೆ ಮುಖ್ಯ ವಕ್ತಾರರು, ರಾಜ್ಯ ವಕ್ತಾರರು, ಮಾಧ್ಯಮ ಸಂಯೋಜಕರ ನೇಮಕ

Update: 2024-04-17 15:38 GMT

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೆಪಿಸಿಸಿ ರಾಜ್ಯ ಮುಖ್ಯ ವಕ್ತಾರರಾಗಿ 21 ಪದಾಧಿಕಾರಿಗಳು, ರಾಜ್ಯ ವಕ್ತಾರರಾಗಿ 36 ಪದಾಧಿಕಾರಿಗಳು, ಒಬ್ಬರು ರಾಜ್ಯ ಮಟ್ಟದ ಮಾಧ್ಯಮ ಮತ್ತು ಸಂವಹನ ವಿಭಾಗದ ಸಂಯೋಜಕರು ಮತ್ತು ನಾಲ್ಕು ಮಂದಿ ಮಾಧ್ಯಮ ಸಂಯೋಜಕರನ್ನು ನೇಮಕ ಮಾಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬುಧವಾರ ಆದೇಶ ಹೊರಡಿಸಿದ್ದಾರೆ.

ಕೆಪಿಸಿಸಿ ರಾಜ್ಯ ಮುಖ್ಯ ವಕ್ತಾರರನ್ನಾಗಿ ಮಾಜಿ ಎಂಎಲ್‍ಸಿ ವಿ.ಆರ್.ಸುದರ್ಶನ್, ಮಾಜಿ ಸಂಸದ ಡಾ.ಎಲ್.ಹನುಮಂತಯ್ಯ, ಮಾಜಿ ಸಂಸದೆ ತೇಜಸ್ವಿನಿ ಗೌಡ, ಶಾಸಕ ಎಚ್.ಸಿ.ಬಾಲಕೃಷ್ಣ, ಮಾಜಿ ಎಂಎಲ್‍ಸಿ ಐವಾನ್ ಡಿಸೋಜಾ, ಮಾಜಿ ಎಂಎಲ್‍ಸಿ ಪಿ.ಆರ್.ರಮೇಶ್, ಶಾಸಕರಾದ ರಿಝ್ವಾನ್ ಅರ್ಷದ್, ಬೇಳೂರು ಗೋಪಿಕೃಷ್ಣ, ಕೋನರೆಡ್ಡಿಯನ್ನು ನೇಮಿಸಲಾಗಿದೆ.

ಅಲ್ಲದೆ, ಶಿವಾನಂದ ಕೌಜಲಗಿ, ಪಿ.ಎಂ.ನರೇಂದ್ರಸ್ವಾಮಿ, ಎಂಎಲ್‍ಸಿ ನಾಗರಾಜ್ ಯಾದವ್, ಮಾಜಿ ಎಂಎಲ್‍ಸಿ ಆಯನೂರು ಮಂಜುನಾಥ್, ಲಾವಣ್ಯ ಬಲ್ಲಾಳ್, ಎಂಎಲ್‍ಸಿ ಯು.ಬಿ.ವೆಂಕಟೇಶ್, ಡಾ.ಶಂಕರ್ ಗುಣ, ಮಾಜಿ ಎಂಎಲ್‍ಸಿ ಆರ್.ವಿ. ವೆಂಕಟೇಶ್, ದ್ವಾರಕಾನಾಥ್ ಸಿ.ಎಸ್, ಕುಸುಮಾ ಹನುಮಂತರಾಯಪ್ಪ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಎಂಎಲ್‍ಸಿ ಪ್ರಕಾಶ್ ರಾಥೋಡ್ ಅವರನ್ನು ನೇಮಿಸಲಾಗಿದೆ.

ರಾಜ್ಯ ವಕ್ತಾರರನ್ನಾಗಿ ಬಸವರಾಜ್(ದಾವಣಗೆರೆ), ವೆಂಕಟೇಶ್(ಮೈಸೂರು), ಎಂ.ಜಿ.ಹೆಗ್ಡೆ, ಮಂಜುನಾಥ್ ಅದ್ದೆ, ಭವ್ಯ ನರಸಿಂಹಮೂರ್ತಿ, ಎಸ್.ಎ.ಹುಸೇನ್, ಆಗಾ ಸುಲ್ತಾನ್, ಎಚ್.ಎಚ್.ದೇವರಾಜ್(ಚಿಕ್ಕಮಗಳೂರು), ನಿಝಾಮ್ ಫೌಜ್ದಾರ್, ಕೋರ್ನೇಲೋ ವೆರೋನಿಕಾ(ಉಡುಪಿ), ವಿನಯ್ ರಾಜ್(ದಕ್ಷಿಣ ಕನ್ನಡ), ರಮೇಶ್ ಹೆಗ್ಡೆ(ಶಿವಮೊಗ್ಗ)ಯನ್ನು ನೇಮಕ ಮಾಡಲಾಗಿದೆ.

ವಿಠ್ಠಲ್ ಶೆಟ್ಟಿ, ರವೀಶ್ ಬಸಪ್ಪ(ಚಿಕ್ಕಮಗಳೂರು), ಸೂರ್ಯ ಮುಕುಂದರಾಜ್, ನಾರಾಯಣಸ್ವಾಮಿ ಎಂ.(ಮಾಲೂರು), ಶೈಲಜಾ ಪಾಟೀಲ್(ಕೊಪ್ಪಳ), ಶೈಲಜಾ ಅಮರ್‍ನಾಥ್(ಪುತ್ತೂರು), ಎಂ.ಜಿ.ಸುಧೀಂದ್ರ, ನಾಯ್ಡು ಬಿ.ಆರ್., ಎಚ್.ಬಿ.ಚಾಂದ್ ಪಾಷಾ, ಸೌವದ್ ಗೌಂಡ್ಕ, ದಯಾನಂದ್, ಇರ್ಶಾದ್ ಅಹ್ಮದ್, ಮಹಾಂತೇಶ್ ಅಟ್ಟಿ (ಬಾದಾಮಿ), ಬಾಲಕೃಷ್ಣ ಯಾದವ್(ಚಿತ್ರದುರ್ಗ).

ಪದ್ಮಪ್ರಸಾದ್ ಜೈನ್, ಅಶ್ವಿನಿ, ಆಯಿಷಾ ಫರ್ಝಾನಾ(ಮಂಗಳೂರು) ಶತಾಬಿಶ್ ಶಿವಣ್ಣ, ಸಮೃದ್ ಹೆಗ್ಡೆ, ಧೃವ ಜಟ್ಟಿ, ದಿವಾಕರ್ ಎನ್, ಕಶ್ಯಪ್ ನಂದನ್, ದರ್ಶನ್ ಡಿ., ಸ್ವಾತಿ ಚಂದ್ರಶೇಖರ್ ರನ್ನು ನೇಮಕ ಮಾಡಲಾಗಿದೆ.

ರಾಜ್ಯ ಮಟ್ಟದ ಮಾಧ್ಯಮ ಮತ್ತು ಸಂವಹನ ವಿಭಾಗದ ಸಂಯೋಜಕರನ್ನಾಗಿ ಜಿ.ಸಿ.ರಾಜುಗೌಡ ಅವರನ್ನು ಹಾಗೂ ಮಾಧ್ಯಮ ಸಂಯೋಜಕರನ್ನಾಗಿ ರವಿಗೌಡ, ಅಬ್ದುಲ್ ಮುನೀರ್, ಇರ್ಫಾನ್, ಎಚ್.ಕುಮಾರ್ ಅವರನ್ನು ನೇಮಕಗೊಳಿಸಿ ಪ್ರಕಟನೆಯಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News