ಬೆಂಗಳೂರು: ಪರ ಭಾಷಿಕರಿಗೆ ಕನ್ನಡ ಕಲಿಸಲು ಮುಂದಾದ ಆಟೋ ಚಾಲಕ!
Update: 2024-10-21 15:16 GMT
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಆಟೋ ಚಾಲಕನೊಬ್ಬ ‘ಲರ್ನ್ ಕನ್ನಡ ವಿತ್ ಆಟೋ ಕನ್ನಡಿಗ’ ಎಂಬ ಬೋರ್ಡ್‍ವೊಂದನ್ನು ಹಾಕಿ ವಿಭಿನ್ನ ಪ್ರಯತ್ನದ ಮೂಲಕ ಪರ ಭಾಷಿಗರಿಗೆ ಕನ್ನಡ ಪದಗಳನ್ನು ಕಲಿಸುವಂತಹ ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಪ್ರಯಾಣಿಕರು ಆಟೋದಲ್ಲಿ ಮಾತನಾಡುವಂತಹ ಕೆಲವು ಪದಗಳನ್ನು ಇಂಗ್ಲೀಷ್ ಹಾಗೂ ಕನ್ನಡ ಎರಡೂ ಭಾಷೆಯಲ್ಲಿ ಮುದ್ರಿಸಿ ತಮ್ಮ ಆಟೋದಲ್ಲಿ ಚಾಲಕ ಅಂಟಿಸಿದ್ದು, ಈ ಮೂಲಕ ಪರ ಭಾಷಿಗರು ಆಟೋ ಚಾಲಕರ ಜೊತೆ ಸುಲಭವಾಗಿ ಕನ್ನಡದಲ್ಲಿಯೇ ವ್ಯವಹರಿಸಲು ಅನುವುಮಾಡಿದ್ದಾರೆ. ಈ ಕುರಿತ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.