ಬೆಂಗಳೂರು| ಹೆಚ್ಚು ಕೆಲಸ ಮಾಡುವಂತೆ ಒತ್ತಡ, ಸಹೋದ್ಯೋಗಿಯ ಕೊಲೆ: ಆರೋಪಿಯ ಬಂಧನ

Update: 2023-12-26 13:28 GMT

ಬೆಂಗಳೂರು: ಹೆಚ್ಚು ಕೆಲಸ ಮಾಡುವಂತೆ ಒತ್ತಡ ಹೇರಿದ್ದಕ್ಕೆ ಸಹೋದ್ಯೋಗಿಯನ್ನು ಕೊಲೆ ಮಾಡಿದ್ದ ವಾರಣಾಸಿಯ 22 ವರ್ಷದ ಫ್ಯಾಬ್ರಿಕ್ ತಯಾರಕನನ್ನು ಇಲ್ಲಿನ ಬೇಗೂರು ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ದಿಲ್ಖುಷ್ ಎಂಬುವನನ್ನು ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಆರೋಪಿ ದಿಲ್ಖುಷ್ ಮೂರು ತಿಂಗಳ ಹಿಂದೆ ನಗರಕ್ಕೆ ಬಂದು ನೆಲೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಉತ್ತರ ಪ್ರದೇಶದ ಬರೇಲಿಯ ಮುರ್ಷಿದಾಬಾದ್ ಗ್ರಾಮದ ಗುಲ್ಫಾಮ್ ಅವರೊಂದಿಗೆ ಫ್ಯಾಬ್ರಿಕೇಟರ್ ಆಗಿ ಬೆಂಗಳೂರಿನ ದೇವರಚಿಕ್ಕನಹಳ್ಳಿ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದನು. ನಿನಗೆ ಕೆಲಸದ ಅನುಭವವಿದೆ ಹೀಗಾಗಿ ಹೆಚ್ಚು ಕೆಲಸ ಮಾಡುವಂತೆ ಸಹದ್ಯೋಗಿ ಮೃತ ಗುಲ್ಫಾಮ್,  ದಿಲ್ಖುಷ್ ಮೇಲೆ ಒತ್ತಡ ಹೇರುತ್ತಿದ್ದ. ಮತ್ತು ಕೆಲಸದ ಸಮಯದ ಬಗ್ಗೆ ಇಬ್ಬರೂ ಆಗಾಗ್ಗೆ ಜಗಳವಾಡುತ್ತಿದ್ದರು.

ಇದರಿಂದ ಆಕ್ರೋಶಗೊಂಡ ದಿಲ್ಖುಷ್ ಕಟ್ಟಡದಲ್ಲಿ ಮಲಗಿದ್ದ ಗಲ್ಫಾಮ್‍ನ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ. ನಗರದಲ್ಲಿ ನೆಲೆಸಿದ್ದ ಗಲ್ಫಾಮ್‍ನ ಸಂಬಂಧಿಯೊಬ್ಬರು ನಾಪತ್ತೆಯಾಗಿರುವ ಕುರಿತು ಬೇಗೂರು ಪೊಲೀಸರಿಗೆ ದೂರು ನೀಡಿದಾಗ ಘಟನೆ ಬೆಳಕಿಗೆ ಬಂದಿದೆ.

ಅಪರಾಧದ ನಂತರ ದಿಲ್ಖುಷ್ ವಾರಣಾಸಿಗೆ ತೆರಳಿದಾಗ ಪೊಲೀಸರಿಗೆ ಅನುಮಾನ ಬಂದಿತ್ತು. ಮೇಲಾಗಿ ದಿಲ್ಖುಷ್ ಒಬ್ಬನೇ ಗಲ್ಫಾಮ್ ಜೊತೆ ಕಟ್ಟಡದಲ್ಲಿ ತಂಗಿದ್ದ. 24 ಗಂಟೆಗಳಲ್ಲಿ ಪೊಲೀಸ್ ಸಿಬ್ಬಂದಿ ವಾರಣಾಸಿಗೆ ತೆರಳಿ ದಿಲ್ಖುಷ್ ನನ್ನು ಅವನ ನಿವಾಸದಿಂದ ಬಂಧಿಸಿದರು. ಪೊಲೀಸರ ವಿಚಾರಣೆ ವೇಳೆ ದಿಲ್ಖುಷ್ ತನ್ನ ಅಪರಾಧವನ್ನು ಒಪ್ಪಿಕೊಂಡು ಹೆಚ್ಚು ಕೆಲಸ ಮಾಡುವಂತೆ ಒತ್ತಡ ಹಾಕಿದ್ದಕ್ಕೆ ಕೊಲೆ ಮಾಡಿದ್ದೇನೆ ಎಂದು ಹೇಳಿಕೆ ನೀಡಿದ್ದಾನೆ. ಈ ಸಂಬಂಧ ಬೇಗೂರು ಪೊಲೀಸರು ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News