ಬೆಂಗಳೂರು | ನಕಲಿ ಕೀ ಬಳಸಿ ವಾಹನ ಕಳ್ಳತನ: ಮೂವರ ಬಂಧನ

Update: 2024-02-06 13:01 GMT

ಸಾಂದರ್ಭಿಕ ಚಿತ್ರ

ಬೆಂಗಳೂರು: ಮನೆ ಎದುರು ಹಾಗೂ ಇತರೆಡೆ ಪಾರ್ಕ್ ಮಾಡಲಾಗುತ್ತಿದ್ದ ಕಾರು ಮತ್ತು ದ್ವಿಚಕ್ರ ವಾಹನಗಳನ್ನು ಕದಿಯುತ್ತಿದ್ದ ಮೂವರು ಆರೋಪಿಗಳನ್ನು ಇಲ್ಲಿನ ಕೋರಮಂಗಲ ಠಾಣಾ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ದೀಪಕ್, ತೇಜಸ್ ಹಾಗೂ ಭರತ್ ಎಂಬುವರನ್ನು ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದ್ದು, ಬಂಧಿತರಿಂದ 10.65 ಲಕ್ಷ ರೂ. ಮೌಲ್ಯದ 5 ಕಾರು ಮತ್ತು 2 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

ಈ ಆರೋಪಿಗಳು ನಕಲಿ ಕೀ ಬಳಸಿ ನಗರದ ವಿವಿಧೆಡೆ ಕಳ್ಳತನ ಮಾಡುತ್ತಿದ್ದರು. ಆಗ್ನೇಯ ವಿಭಾಗದ ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ಪ್ರಕರಣಗಳ ತನಿಖೆ ಕೈಗೊಂಡಿದ್ದರು.

ಕೋರಮಂಗಲ ಠಾಣಾ ವ್ಯಾಪ್ತಿಯ ಒಂದು ಕಾರು ಕಳ್ಳತನ ಮತ್ತು ಒಂದು ಕಳವು ಯತ್ನ, ರಾಜರಾಜೇಶ್ವರಿನಗರ, ಜಯನಗರ, ಹನುಮಂತನಗರ, ಸುಬ್ರಹ್ಮಣ್ಯನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ತಲಾ ಒಂದೊಂದು ಕಾರು ಕಳ್ಳತನ ಪ್ರಕರಣಗಳು, ಬನಶಂಕರಿ ಹಾಗೂ ಕೆಂಗೇರಿ ಠಾಣೆಯಲ್ಲಿ ದಾಖಲಾದ ತಲಾ ಒಂದೊಂದು ದ್ವಿಚಕ್ರ ವಾಹನ ಕಳವು ಪ್ರಕರಣಗಳು ತನಿಖೆಯಿಂದ ತಿಳಿದು ಬಂದಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News