ಲಿಮ್ಕಾ ಬುಕ್ ರೆಕಾರ್ಡ್‍ಗೆ ಬಸವರಾಜ ಹೊರಟ್ಟಿ ಭಾಜನ: ಅಭಿನಂದನೆ

Update: 2024-02-13 18:00 GMT

ಬೆಂಗಳೂರು: ಎಂಟು ಬಾರಿ ಒಂದೇ ಕ್ಷೇತ್ರದಿಂದ ಪರಿಷತ್ ಸದಸ್ಯರಾಗಿ ಆಯ್ಕೆಯಾಗುತ್ತಾ ಬರುತ್ತಿರುವ ಬಸವರಾಜ ಹೊರಟ್ಟಿ ಲಿಮ್ಕಾ ಬುಕ್ ರೆಕಾರ್ಡ್‍ಗೆ ಭಾಜನರಾಗಿದ್ದು, ಮಂಗಳವಾರದಂದು ಪರಿಷತ್‍ನ ಎಲ್ಲ ಸದಸ್ಯರು ಅಭಿನಂಧನೆ ಸಲ್ಲಿಸಿದರು.

ಮೊದಲಿಗೆ ಪರಿಷತ್ತಿನಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಮಾತನಾಡಿ, ಎಂಟು ಬಾರಿ ಒಂದೇ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗುತ್ತಾ ಬರುತ್ತಿರುವ ಬಸವರಾಜ ಹೊರಟ್ಟಿ ಅವರು ಹೊಸ ದಾಖಲೆಯನ್ನು ಬರೆದಿದ್ದಾರೆ. ಲಿಮ್ಕಾ ಬುಕ್ ಆಫ್ ರೆಕಾರ್ಡ್ ಎನ್ನುವುದು ಒಂದು ಗೌರವ. ಇತಿಹಾಸ ನೆನಪಿಟ್ಟುಕೊಳ್ಳುವ ಪ್ರಶಸ್ತಿ ಇದಾಗಿದೆ. 43 ವರ್ಷಗಳಿಂದ ಒಂದೇ ಕ್ಷೇತ್ರದಿಂದ ಆಯ್ಕೆಯಾಗಿ ಬಂದವರು ಇವರಾಗಿದ್ದಾರೆ ಎಂದು ಹೇಳಿದರು. ನಂತರ ಪರಿಷತ್ತಿನಲ್ಲಿ ಹಾಜರಿದ್ದ ಎಲ್ಲ ಸದಸ್ಯರು ಬಸವರಾಜ ಹೊರಟ್ಟಿ ಅವರಿಗೆ ಅಭಿನಂದನೆ ಸಲ್ಲಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News