ಅರಣ್ಯ ಒತ್ತುವರಿ ತೆರವು ವಿಧಾನಸೌಧದಿಂದಲೇ ಆರಂಭವಾಗಲಿ : ನೈಜ ಹೋರಾಟಗಾರರ ವೇದಿಕೆ ಅಗ್ರಹ

Update: 2024-09-04 17:35 GMT

ಈಶ್ವರ್‌ ಖಂಡ್ರೆ

ಬೆಂಗಳೂರು: ವಿಧಾನಸೌಧದಲ್ಲಿ ಇರುವ ಹಿರಿಯ ಅಧಿಕಾರಿಗಳನ್ನು ಒಳಗೊಂಡಂತೆ ಜನಪ್ರತಿನಿಧಿಗಳು, ರಾಜಕೀಯ ಮುಖಂಡರುಗಳು, ಅರಣ್ಯ ಭೂಮಿಯ ಒತ್ತುವರಿಯನ್ನು ತೆರವುಗೊಳಿಸುವ ಮೂಲಕ ಈ ಅರಣ್ಯ ಒತ್ತುವರಿ ತೆರವು ಕಾರ್ಯಕ್ರಮ ವಿಧಾನಸೌಧದಿಂದಲೇ ಪ್ರಾರಂಭವಾಗಬೇಕಾಗಿದೆ ಎಂದು ನೈಜ ಹೋರಾಟಗಾರರ ವೇದಿಕೆ ಅಗ್ರಹಿಸಿದೆ.

ಬುಧವಾರ ವೇದಿಕೆಯ ಮುಖಂಡ ಎಚ್.ಎಂ.ವೆಂಕಟೇಶ್ ಅವರು, ಅರಣ್ಯ- ಜೀವಿ ಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್‌ ಖಂಡ್ರೆ ಅವರಿಗೆ ಪತ್ರ ಬರೆದಿದ್ದು, ಅರಣ್ಯ ಜಮೀನನ್ನು ಒತ್ತುವರಿ ಮಾಡಿಕೊಂಡಿರುವ ದೊಡ್ಡ ದೊಡ್ಡ ಕಾಫಿ ಪ್ಲಾಂಟೇಶನ್, ರೆಸಾರ್ಟ್, ಅಡಿಕೆ ತೋಟ, ಏಲಕ್ಕಿ, ಶುಂಠಿ, ರಬ್ಬರ್ ತೋಟಗಳನ್ನು ತೆರವುಗೊಳಿಸುವ ಮೂಲಕ ಪಶ್ಚಿಮ ಘಟ್ಟಗಳಲ್ಲಿರುವ, ಗಿರಿ ಪ್ರದೇಶದಲ್ಲಿರುವ ವನ್ಯಜೀವಿಗಳ, ಪಕ್ಷಿ ಸಂಕುಲನಗಳ ರಕ್ಷಣೆ ಮತ್ತು ಗುಡ್ಡ ಕುಸಿಯುವಂತಹ ಅನಾಹುತ, ಅವಘಡಗಳನ್ನು ತಡೆಯಬಹುದಾಗಿದೆ ಎಂದಿದ್ದಾರೆ.

ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗಕ್ಕೆ ಮುಖ್ಯಮಂತ್ರಿಗಳ ವಿಶಿಷ್ಟ ಸೇವಾ ಪದಕ ಪ್ರಧಾನ ಮಾಡುವ ಸಂದರ್ಭದಲ್ಲಿ ಅರಣ್ಯ ಒತ್ತುವರಿಯನ್ನು ನಿಷ್ಟೂರವಾಗಿ ತಡೆಯಿರಿ ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಮೊದಲು ಒತ್ತುವರಿ ತೆರವುಗೊಳಿಸುವ ಬಗ್ಗೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಬೇಕಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಅರಣ್ಯ ಒತ್ತುವರಿಯು ವಿಧಾನಸೌಧದಿಂದಲೇ ನಡೆಯಲಿ, ಅಲ್ಲಿರುವ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು, ವಿವಿಧ ಪಕ್ಷದ ರಾಜಕಾರಣಿಗಳು ಎಷ್ಟು ಅರಣ್ಯ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಬಗ್ಗೆ ಸರ್ವೆ ನಡೆಯಲಿ ಮತ್ತು ಅವರು ಸ್ವಯಂ ಪ್ರೇರಿತರಾಗಿ ಅರಣ್ಯ ಒತ್ತುವರಿಯನ್ನು ಸ್ವತಃ ತೆರವುಗೊಳಿಸಿ ಅರಣ್ಯ ಇಲಾಖೆಗೆ ವಹಿಸಲಿ. ಇದರಿಂದ ಪ್ರಾಮಾಣಿಕವಾದ ಸಂದೇಶ ರವಾನೆ ಆಗುತ್ತದೆ. ಮತ್ತು ಇತರರಿಗೆ ಮಾದರಿಯಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News