ಶಾಸಕ ಸ್ಥಾನದಿಂದ ಮುನಿರತ್ನ ವಜಾಗೊಳಿಸಿ : ಇಂದೂಧರ ಹೊನ್ನಾಪುರ

Update: 2024-09-17 14:41 GMT

ಬೆಂಗಳೂರು : ದಲಿತರು, ಮಹಿಳೆಯರ ಬಗ್ಗೆ ಹೀನಾಯವಾಗಿ ಮಾತನಾಡಿರುವುದ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಕೂಡಲೇ ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಹಿರಿಯ ಪತ್ರಕರ್ತ ಇಂದೂಧರ ಹೊನ್ನಾಪುರ ಆಗ್ರಹಿಸಿದ್ದಾರೆ.

ಮಂಗಳವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಮುನಿರತ್ನ ವಿರುದ್ಧ ದಸಂಸ ರಾಜ್ಯ ಸಮಿತಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಶಾಸಕ ಮುನಿರತ್ನಗೆ ದೇಶದ ಸಂವಿಧಾನ, ಕಾನೂನಿನ ಕನಿಷ್ಠ ಅರಿವು ಇಲ್ಲ. ಶಾಸನಸಭೆಗೆ ಆಯ್ಕೆಯಾಗಿರುವ ವ್ಯಕ್ತಿ ಏನು ಮಾತನಾಡಬೇಕೆಂಬುದು ತಿಳಿದಿಲ್ಲದಿರುವುದು ಅತ್ಯಂತ ಬೇಜವಾಬ್ಧಾರಿತನದಿಂದ ಕೂಡಿದೆ. ಕರ್ನಾಟಕ ವಿಧಾನಸಭೆಗೆ ತನ್ನದೇ ಆದ ಗೌರವವಿದೆ ಎಂದು ಹೇಳಿದರು.

ಈ ಪ್ರಕರಣದಲ್ಲಿ ಕಾನೂನಿಂದ ನುಣುಚಿಕೊಂಡು ಹೋಗದಂತೆ ಕ್ರಮವಹಿಸಬೇಕು. ಕರ್ನಾಟಕದಿಂದ ಶಾಸಕ ಸ್ಥಾನದಿಂದ ವಜಾಗೊಳಿಸುವ ಜತೆಗೆ ಅವರನ್ನು ಕರ್ನಾಟಕದಿಂದ ಗಡಿಪಾರು ಮಾಡಬೇಕು. ಗುತ್ತಿಗೆದಾರನ ಪತ್ನಿಯ ಬಗ್ಗೆ ಮುನಿರತ್ನ ಮಾತನಾಡಿರುವುದನ್ನು ನೋಡಿದ ಬಿಜೆಪಿಯವರು ಕೂಡಲೇ ಅವರನ್ನು ಪಕ್ಷದಿಂದ ವಜಾಗೊಳಿಸಬೇಕಿತ್ತು. ಬಿಜೆಪಿಯ ಕೆಲವರು ಮುನಿರತ್ನ ಹಾಗೆ ಮಾತನಾಡಿಲ್ಲ ಎಂದು ಹೇಳುತ್ತಾರೆ. ಸಹಜವಾಗಿಯೇ ಮುನಿರತ್ನ ಹಾಗೇಯೇ ಮಾತನಾಡುತ್ತಾರೆ. ಧರ್ಮ, ಸಂಸ್ಕೃತಿಯ ಬಗ್ಗೆ ಬಾಷಣ ಬಿಗಿಯು ಬಿಜೆಪಿಗರು ಮುನಿರತ್ನ ಹೇಳಿಕೆಗಳನ್ನು ವಿರೋಧಿಸಬೇಕಿತ್ತು ಎಂದು ಹೇಳಿದರು.

ಪ್ರತಿಭಟನೆಯಲ್ಲಿ ದಸಂಸ ಖಜಾಂಚಿ ಗಂಗನಂಜಯ್ಯ, ಹೋರಾಟಗಾರ ಎನ್.ವೆಂಕಟೇಶ್, ವಕೀಲ ಅನಂತನಾಯ್ಕ್, ವಿಭಾಗೀಯ ಸಂಚಾಲಕ ಕೃಷ್ಣಮೂರ್ತಿ, ಎನ್.ನರಸಿಂಹಮೂರ್ತಿ, ಆಲಗೂಡು ಶಿವಕುಮಾರ್, ಹುಲ್ಕೆರೆ ಮಹದೇವ, ಶ್ರೀನಿವಾಸ್, ಶರವಣ, ಎಂ.ಶಿವಲಿಂಗಯ್ಯ, ಜಯಂತಿ ಆರ್. ಮತ್ತಿತರರು ಉಪಸ್ಥಿತರಿದ್ದರು.

‘ಶಾಸಕ ಮುನಿರತ್ನ ತನ್ನ ಸ್ಥಾನದ ಘನತೆಯನ್ನು ಮರೆತು, ಬೀದಿರೌಡಿಯಂತೆ ಅಸಹ್ಯಕರವಾಗಿ ವರ್ತಿಸಿದ್ದಾರೆ. ಒಕ್ಕಲಿಗ ಸಮುದಾಯದ ಮಹಿಳೆಯರ ಬಗ್ಗೆ ಹೀನ ದೃಷ್ಠಿಯಿಂದ ಅಪಮಾನಿರುವುದಲ್ಲದೇ, ಅನಗತ್ಯವಾಗಿ ದಲಿತ ವ್ಯಕ್ತಿಯ ಕುರಿತು ಜಾತಿ ನಿಂದನೆ ಮಾಡಿರುವುದು ಖಂಡನೀಯ. ಅವರ ವಿರುದ್ಧ ದಾಖಲಾಗಿರುವ ದೂರುಗಳನ್ನು ಆಧರಿಸಿ ಶಾಸಕ ಸ್ಥಾನದಿಂದ ವಜಾಗೊಳಿಸಬೇಕು’

-ಗುರುಪ್ರಸಾದ್ ಕೆರೆಗೋಡು, ದಸಂಸ ಸಂಚಾಲಕ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News