ಬೆಂಗಳೂರು | ಕಟ್ಟಡವು ಕುಸಿದ ಪ್ರಕರಣ : ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಅಮಾನತು

Update: 2024-10-23 16:24 GMT

ನಿರ್ಮಾಣ ಹಂತದ ಕಟ್ಟಡ ಕುಸಿತ

ಬೆಂಗಳೂರು : ಮಂಗಳವಾರದಂದು ನಗರದಲ್ಲಿ ಕಟ್ಟಡ ಕುಸಿದು ಬಿದ್ದು, ಸುಮಾರು 8 ಮಂದಿ ಕಟ್ಟಡ ಕಾರ್ಮಿಕರು ಸಾವಿಗೀಡಾಗಿದ್ದಾರೆ. ಘಟನೆ ನಡೆಯಲು ಮೇಲ್ನೋಟಕ್ಕೆ ಕಾರಣಕರ್ತರಾಗಿರುವ ಬಿಬಿಎಂಪಿಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿನಯ್ ಕೆ ಅವರನ್ನು ಅಮಾನತು ಮಾಡಲಾಗಿದೆ.

ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿನಯ್ ಕೆ ಅವರು ಗ್ರೂಫ್-ಎ ವೃಂದದ ಅಧಿಕಾರಿಯಾಗಿದ್ದು, ಶಿಸ್ತು ಪ್ರಾಧಿಕಾರವು ಸರಕಾರದ ನಗರಾಭಿವೃದ್ಧಿ ಇಲಾಖೆಯಾಗಿರುವುದರಿಂದ, ಸರಕಾರದ ಘಟನೋತ್ತರ ಅನುಮೋದನೆಯನ್ನು ನಿರೀಕ್ಷಿಸಿ ಅಮಾನತು ಆದೇಶ ಹೊರಡಿಸಲಾಗಿದೆ.

ವಿನಯ್ ಕೆ ಅವರು 1958ರ ಕೆ.ಸಿ.ಎಸ್.ಆರ್ ನಿಯಮ-98ರನ್ವಯ ಜೀವಾನಾಧಾರ ಭತ್ಯೆಯನ್ನು ಪಡೆಯಲು ಅರ್ಹರಿರುತ್ತಾರೆ ಹಾಗೂ ವೇತನ ಬಟವಾಡೆ ಸ್ಥಳವನ್ನು ಮುಖ್ಯ ಅಭಿಯಂತರರು(ಟಿ.ವಿ.ಸಿ.ಸಿ) ಕಛೇರಿಗೆ ವರ್ಗಾಯಿಸಿದೆ. ಅಮಾನತ್ತಿನ ಅವಧಿಯಲ್ಲಿ ಅನುಮತಿಯಿಲ್ಲದೇ ಕೇಂದ್ರ ಸ್ಥಾನವನ್ನು ಬಿಡತಕ್ಕದ್ದಲ್ಲ ಎಂದು ಆದೇಶಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News