ಬೆಂಗಳೂರು | ಕ್ಷುಲ್ಲಕ ವಿಚಾರಕ್ಕಾಗಿ ಪುತ್ರನನ್ನೇ ಕೊಲೆಗೈದ ತಂದೆ!

Update: 2024-11-16 16:01 GMT

ಸಾಂದರ್ಭಿಕ ಚಿತ್ರ

ಬೆಂಗಳೂರು: ಕ್ಷುಲ್ಲಕ ವಿಚಾರಕ್ಕಾಗಿ ಪುತ್ರನನ್ನೆ ತಂದೆ ಕೊಲೆಗೈದಿರುವ ಘಟನೆ ಇಲ್ಲಿನ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕಾಶಿನಗರದಲ್ಲಿ ನಿನ್ನೆ ತಡರಾತ್ರಿ ವೇಳೆ ಈ ದುರ್ಘಟನೆ ನಡೆದಿದ್ದು, ತೇಜಸ್ (14) ಎಂಬ ಬಾಲಕ ತಂದೆಯಿಂದಲೇ ಹಲ್ಲೆಗೊಳಗಾಗಿ ಸಾವನ್ನಪ್ಪಿದ್ದಾನೆ. ತಂದೆ ರವಿಕುಮಾರ್ ಈ ಕೃತ್ಯವೆಸಗಿರುವುದಾಗಿ ಗೊತ್ತಾಗಿದೆ.

ಆರೋಪಿ ರವಿ ಕುಮಾರ್ ಬೆಂಗಳೂರಿನಲ್ಲಿ ಕಾರ್ಪೆಂಟರ್ ಕೆಲಸ ಮಾಡುತ್ತಾ ಬಂದ ಹಣದಲ್ಲಿ ಕುಟುಂಬ ನಿರ್ವಹಣೆ ಮಾಡುತ್ತಿದ್ದನು. ಆದರೆ, ಅಪ್ಪನಿಗೆ ಪ್ರತಿನಿತ್ಯ ಒಂದೊಂದೇ ಬೇಡಿಕೆ ಇಡುತ್ತಿದ್ದ ಮಗನಿಂದ ಅಪ್ಪನಿಗೆ ಬೇಸರ ಉಂಟಾಗುತ್ತಿತ್ತು. ಇತ್ತೀಚಿಗೆ ಹೊಸ ಮೊಬೈಲ್ ಕೊಡಿಸುವಂತೆ ಪುತ್ರ ಕೇಳಿದ್ದಾನೆ.

ಇದರಿಂದ ಕೊಪಗೊಂಡ ರವಿಕುಮಾರ್, ನಿನ್ನೆ ರಾತ್ರಿಯೂ ಕೂಡ ಮದ್ಯ ಸೇವಿಸಿ ಬಂದು ಮಗನ ಮೇಲೆ ಹಲ್ಲೆ ಮಾಡುವಾಗ ಆತನನ್ನು ಬ್ಯಾಟ್‍ನಿಂದ ಥಳಿಸಿ ಗೋಡೆಗೆ ತಳ್ಳಿದ್ದಾನೆ. ಆದರೆ, ಅಪ್ರಾಪ್ತ ಮಗ ತೇಜಸ್ ಅಪ್ಪ ದೂಡಿದ ರಭಸಕ್ಕೆ ಗೋಡೆಗೆ ಹೋಗಿ ತಲೆ ಹೊಡೆದುಕೊಂಡು ಅಲ್ಲಿಯೇ ರಕ್ತಸ್ರಾವ ಉಂಟಾಗಿದೆ ಎನ್ನಲಾಗಿದೆ.

ತಲೆಗೆ ಬಲವಾದ ಪೆಟ್ಟು ಬಿದ್ದ ತಕ್ಷಣ ಮನೆಯವರು ಕೂಡಲೇ ಆತನನ್ನು ದಾಖಲು ಮಾಡಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮಗ ತೇಜಸ್ ಸಾವಿಗೀಡಾಗಿದ್ದಾರೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಮೃತ ಬಾಲಕನ ತಂದೆ ರವಿಕುಮಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News