ಬೆಂಗಳೂರು: ಏಳನೆ ಮಹಡಿಯಿಂದ ಜಿಗಿದು ಬಾಲಕ ಆತ್ಮಹತ್ಯೆ

Update: 2024-11-18 14:11 GMT

ಬೆಂಗಳೂರು: 16 ವರ್ಷದ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಗೆದ್ದಲಹಳ್ಳಿಯಲ್ಲಿ ಜರುಗಿದೆ.

ಖಾಸಗಿ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ಓದುತ್ತಿದ್ದ ಆದೀವ್ (16) ಎಂಬಾತ ಸಾವನ್ನಪ್ಪಿದ ಬಾಲಕ ಎಂದು ಗುರುತಿಸಲಾಗಿದೆ.

ರವಿವಾರ ತಡರಾತ್ರಿ ಅಪಾರ್ಟ್‍ಮೆಂಟ್‍ನ ಏಳನೆ ಮಹಡಿಯಿಂದ ಕೆಳಗೆ ಜಿಗಿದು ಆದೀವ್ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಪೊಲೀಸರು ಪರಿಶೀಲಿಸಿದ್ದು, ಮೃತದೇಹ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News