ಬೆಂಗಳೂರು | ಮಾದಕ ದ್ರವ್ಯ ಸಾಗಾಟ: ಮಹಿಳೆ ಸೆರೆ
Update: 2025-03-20 23:27 IST

ಬೆಂಗಳೂರು : ವಿದೇಶದಿಂದ ಅಕ್ರಮವಾಗಿ ಮಾದಕ ದ್ರವ್ಯ ಸಾಗಿಸುತ್ತಿದ್ದ ಆರೋಪ ಸಂಬಂಧ ಮಹಿಳೆಯನ್ನು ಕಂದಾಯ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದು, 38.8 ಕೋಟಿ ರೂ. ಮೌಲ್ಯದ 3 ಕೆ.ಜಿ ಕೊಕೇನ್ ಜಪ್ತಿ ಮಾಡಿದ್ದಾರೆ.
ಆರೋಪಿ ಮಹಿಳೆಯು ಘಾನಾ ದೇಶದ ಪ್ರಜೆಯಾಗಿದ್ದಾಳೆ ಎಂದು ಗುರುತಿಸಲಾಗಿದೆ.
ಇತ್ತೀಚಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕತಾರ್‍ನಿಂದ ಬಂದ ಮಹಿಳೆಯನ್ನು ವಶಕ್ಕೆ ಪಡೆದ ಡಿಆರ್‍ಐ ಅಧಿಕಾರಿಗಳು ವಿಚಾರಣೆ ನಡೆಸಿದಾಗ, ಆಕೆ ಅಕ್ರಮವಾಗಿ ಮಾದಕ ದ್ರವ್ಯ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಆರೋಪಿ ಮಹಿಳೆಯು ಘಾನಾ ದೇಶದ ಪ್ರಜೆಯಾಗಿದ್ದಾಳೆ ಎನ್ನಲಾಗಿದೆ.
ಖಚಿತ ಮಾಹಿತಿ ಆಧರಿಸಿ ಅಧಿಕಾರಿಗಳು ಮಹಿಳೆಯ ಲಗೇಜ್ ಪರಿಶೀಲನೆ ನಡೆಸಿದಾಗ 38.8 ಕೋಟಿ ಮೌಲ್ಯದ 3 ಕೆ.ಜಿ ಕೊಕೇನ್ ಮಾದಕ ದ್ರವ್ಯವನ್ನು ಮರೆಮಾಚಿ ಸಾಗಾಣಿಕೆ ಮಾಡುತ್ತಿರುವುದು ಗೊತ್ತಾಗಿದೆ. ಬಳಿಕ ಆಕೆಯನ್ನು ಬಂಧಿಸಲಾಗಿದೆ ಎಂದು ಡಿಆರ್‍ಐ ಮೂಲಗಳು ತಿಳಿಸಿವೆ.