ಬೆಂಗಳೂರು: ಕುರ್ ಆನ್ ಪಾರಾಯಣ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ
ಬೆಂಗಳೂರು : ಮಂಗಳೂರು ಮುಸ್ಲಿಮ್ ಯೂಥ್ ಕೌನ್ಸಿಲ್(ಎಂ.ಎಂ.ವೈ.ಸಿ.) ಬೆಂಗಳೂರು ವತಿಯಿಂದ ಕಳೆದ ತಿಂಗಳು ನಡೆದ ಕುರ್ ಆನ್ ಪಾರಾಯಣ ಸ್ಪರ್ಧಾ ವಿಜೇತರಿಗೆ ಬಹುಮಾನ ಹಾಗೂ ಪ್ರಸಂಶ ಪತ್ರ ವಿತರಣೆ ಕಾರ್ಯಕ್ರಮವು ಶುಕ್ರವಾರ ಬೆಂಗಳೂರಿನ ಎಚ್.ಬಿ.ಆರ್.ಬಡಾವಣೆಯಲ್ಲಿರುವ ಬ್ಯಾರಿ ಸೌರ್ಹಾದ ಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಎಂ.ಎಂ.ವೈ.ಸಿ ಬೆಂಗಳೂರು ಗೌರವಾಧ್ಯಕ್ಷ ಉಮ್ಮರ್ ಹಾಜಿ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಂ.ಎಂ.ವೈ.ಸಿ ಬೆಂಗಳೂರು ಇದರ ಸಂಸ್ಥಾಪಕ ಅಧ್ಯಕ್ಷ ಅಬೂಬಕ್ಕರ್ ಮಾತನಾಡಿ, ಎಂ.ಎಂ.ವೈ.ಸಿ ಸ್ಥಾಪನೆ ನಂತರ ಸಂಘಟನೆ ನೇತೃತ್ವದಲ್ಲಿ ವಿವಿಧ ಕಡೆ ನಡೆಸಿದಂತಹ ಸಮಾಜ ಸೇವಾ ಕಾರ್ಯಗಳನ್ನು ನಡೆಸುತ್ತಿರುವ ಎಂ.ಎಂ.ವೈ.ಸಿ ಪದಾಧಿಕಾರಿಗಳು, ಸದಸ್ಯ ಬಂಧುಗಳಿಗೆ ಹೃದಯಾಂತರಾಳದಿಂದ ಅಭಿನಂದನೆಗಳು ಸಲ್ಲಿಸಿದರು.
ವೇದಿಕೆಯಲ್ಲಿ ಬ್ಯಾರಿ ವೆಲ್ಫೇರ್ ಅಸೋಸಿಯೇಷನ್ ಬೆಂಗಳೂರು ಪ್ರಮುಖರಾದ ಮಕ್ಸೂದ್ ಅಹಮ್ಮದ್ ಪ್ರಾಸ್ತಾವಿಕವಾಗಿ ಮಾತನಾಡಿ, ಎಂ.ಎಂ.ವೈ.ಸಿ ಬೆಂಗಳೂರು ಆರಂಭಗೊಂಡಾಗ ಬ್ಯಾರಿ ವೆಲ್ಫೇರ್ ಅಸೋಸಿಯೇಷನ್ ಇರುವಾಗ ಬೆಂಗಳೂರಿನಲ್ಲಿ ಇನ್ನು ಬೇರೆ ಬೇರೆ ಸಂಘಟನೆಗಳು ಯಾಕೆ ಎಂದು ನಮ್ಮ ಅಭಿಪ್ರಾಯವಾಗಿತ್ತು. ಆದರೆ, ನಮ್ಮ ಆಲೋಚನೆಗಳನ್ನು ಮೀರಿಸುವ ಕೆಲಸ ಕಾರ್ಯಗಳನ್ನು ಯಾವುದೇ ಪ್ರಚಾರ ಇಲ್ಲದೆ ಬೆಂಗಳೂರಿನಲ್ಲಿ ನೆಲೆಸಿರುವ ಮಂಗಳೂರಿನ ಮುಸ್ಲಿಮರ ತಂಡ ಮಾಡುತ್ತಿರುವುದು ನಮಗೆಲ್ಲ ಹೆಮ್ಮೆಯ ವಿಷಯ ಎಂದು ಸಂಘಟನೆಯ ಕಾರ್ಯಕ್ರಮವನ್ನು ಶ್ಲಾಘಿಸಿದರು.
ನಿವೃತ್ತ ಅಧಿಕಾರಿ ಇಬ್ರಾಹೀಂ ಗೂನಡ್ಕ ಸುಳ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಬ್ಯಾರೀಸ್ ವೆಲ್ಫೇರ್ ಅಸೋಸಿಯೇಷನ್ನ ಪ್ರಮುಖರಾದ ಚೆಯ್ಯಬ್ಬ ಬ್ಯಾರಿ, ಯೂಸೂಫ್ ಪೆಪೊರ್ಡಿ, ಅಶ್ರಫ್ ಬ್ಯಾರಿ, ಎಂ.ಎಂ.ವೈ.ಸಿ ಗೌರವ ಸಲಹೆಗಾರ ಅಬ್ದುಲ್ ರಝಾಕ್, ಉಪಾಧ್ಯಕ್ಷ ವಾಹಿದ್ ಖಾನ್, ಪ್ರಮುಖರಾದ ರಹ್ಮಾನ್ ಎಕ್ಸ್ ಪರ್ಟ್, ಬಶೀರ್ ಪುಣಚಾ, ಸಮದ್ ಸೊಂಪಾಡಿ, ನಿರ್ದೇಶಕರಾದ ಉಮ್ಮರ್ ಕುಂಞ ಸಾಲೆತ್ತೂರು, ಹಬೀಬ್ ನಾಳ, ಅಬ್ಬಾಸ್ ಸಿ.ಪಿ, ರಫೀಕ್ ಟಿಓಟಿ ಮೆಜೆಸ್ಟಿಕ್, ಲತೀಫ್ ಬಿ.ಕೆ, ಅಶ್ರಫ್ ತಾಹ ಇರ್ಫಾನ್, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಪ್ರಶಸ್ತಿ ವಿತರಿಸಿದರು.
ಉಸ್ತಾದ್ ಹಾಫಿಝ್ ರಶೀದ್ ಅವರು ಕಿರಾಅತ್ ಪಠಿಸಿದರು. ಎಂ.ಎಂ.ವೈ.ಸಿ ಪ್ರಮುಖರಾದ ಜುನೈದ್ ಪಿ.ಕೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಲತೀಫ್ ಧನ್ಯವಾದಗಳನ್ನು ಅರ್ಪಿಸಿದರು.
ಪ್ರಶಸ್ತಿ ವಿಜೇತ ಮಕ್ಕಳ ವಿವರ :
ಬಾಲಕರ ಹಿರಿಯರ ವಿಭಾಗದಲ್ಲಿ ಮುಹಮ್ಮದ್ ಸುಹೈಲ್, ನೂರಲ್ ಹಿದಾಯ ಸುನ್ನಿ ಮದ್ರಸಾ ಎಚ್.ಎಸ್.ಆರ್.ಲೇಔಟ್, ಬೆಂಗಳೂರು.
ಬಾಲಕಿಯರ ಹಿರಿಯರ ವಿಭಾಗದಲ್ಲಿ ಫಾತಿಮಾ ಹನ್ನತ್, ಮುನವ್ವೀರುಲ್ ಇಸ್ಲಾಮ್ ಮದ್ರಸಾ ಅರಕೆರೆ, ಬೆಂಗಳೂರು.
ಬಾಲಕರ ಕಿರಿಯರ ವಿಭಾಗದಲ್ಲಿ ಝೈನುಲ್ ಆಬಿದೀನ್, ಅಲ್ ಮದ್ರಸತುಲ್ ಬದ್ರಿಯಾ, ಬೆಂಗಳೂರು.
ಬಾಲಕಿಯರ ಕಿರಿಯ ವಿಭಾಗದಲ್ಲಿ ಮರಿಯಮ್ ಎ.ಸಿ., ದಾವತುಲ್ ಇಸ್ಲಾಮ್ ಮದ್ರಸಾ, ವಿವೇಕ್ ನಗರ, ಬೆಂಗಳೂರು. ಸಹಿತ ಹಲವರು ವಿವಿಧ ವಿಭಾಗಗಳಲ್ಲಿ ದ್ವಿತೀಯ, ತೃತೀಯ ಪ್ರಶಸ್ತಿ ಸ್ವೀಕರಿಸಿದರು.