ವಸತಿ ಸಂಕೀರ್ಣಗಳ ನಿರ್ವಹಣೆಗೆ ಸಹಕಾರ ಸಂಘ ರಚಿಸುವಂತಿಲ್ಲ: ಹೈಕೋರ್ಟ್

Update: 2024-03-05 06:53 GMT

ಬೆಂಗಳೂರು: ವಸತಿ ಸಮುಚ್ಚಯಗಳ ಸಂಕೀರ್ಣಗಳ ನಿರ್ವಹಣೆಗಾಗಿ ಸಹಕಾರ ಸಂಘಗಳನ್ನು ನೋಂದಾಯಿಸದಂತೆ ಸಹಕಾರ ಸಂಘಗಳ ರಿಜಿಸ್ಟಾರ್‌ಗೆ ರಾಜ್ಯ ಹೈಕೋರ್ಟ್‌ ಆದೇಶ ನೀಡಿದೆ.

ಡಿಎಸ್ ಮ್ಯಾಕ್ಸ್ ಸ್ಟಾರ್ನೆಸ್ಟ್ ಎಂಬ ವಸತಿ ಸಮುಚ್ಚಯ ಸಂಕೀರ್ಣದಲ್ಲಿ ಸಹಕಾರ ಸಂಘ ಸ್ಥಾಪನೆಗೆ ನಿರ್ದೇಶನ ಕೋರಿ ಅರುಣ್ ಕುಮಾರ್, ಶ್ರೀನಿವಾಸನ್ ಎಂಬವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ್ ರಾಮನಾಥ್ ಹೆಗಡೆ ನೇತೃತ್ವದ ಏಕಸದಸ್ಯ ಪೀಠ ಆದೇಶ ನೀಡಿದೆ.

ವಸತಿ ಸಮುಚ್ಚಯ ಸಂಕೀರ್ಣವನ್ನು ನಿರ್ವಹಿಸಲು ಸಹಕಾರ ಸಂಘವನ್ನು ನೋಂದಾಯಿಸದಂತೆ ಸಹಕಾರಿ ಸಂಘಗಳ ರಿಜಿಸ್ಟಾರ್‌ಗೆ ಸೂಚಿಸಿದೆ. ಸದಸ್ಯರಿಂದ ಷೇರು ಬಂಡವಾಳ ಸಂಗ್ರಹಿಸುವ ಅನುಮತಿಯನ್ನು ಸಹ ರದ್ದುಪಡಿಸಿದೆ. ಕರ್ನಾಟಕ ಅಪಾರ್ಟ್‌ಮೆಂಟ್ ಮಾಲಕತ್ವ ಕಾಯ್ದೆ, 1972ರ ಅಡಿಯಲ್ಲಿ ಸಂಘವನ್ನು ರಚಿಸುವಂತೆ ನ್ಯಾಯಾಲಯ ಬಿಲ್ಡರ್‌ ಡಿಎಸ್ ಮ್ಯಾಕ್ಸ್‌ಗೆ ನಿರ್ದೇಶನ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News