ಕಲೆ ಮತ್ತು ಸಂಸ್ಕೃತಿ ಮೂಲಕ ಸಮುದಾಯವನ್ನು ಬೆಸೆದ ಇಕೋವರ್ಲ್ಡ್ ಹಬ್ಬ

Update: 2024-10-26 17:09 GMT

ಬೆಂಗಳೂರು : ಬ್ರೂಕ್‌ಫೀಲ್ಡ್ ಪ್ರಾಪರ್ಟೀಸ್ ಸಂಸ್ಥೆಯು ಹಳೇ ಬೆಂಗಳೂರಿನ ಕಲೆ, ಆಹಾರ, ಪರಂಪರೆ ಮತ್ತು ಸಂಸ್ಕೃತಿಯನ್ನು ಸಂಭ್ರಮಿಸುವ ಮೊತ್ತಮೊದಲ ಇಕೋವರ್ಲ್ಡ್ ಹಬ್ಬವನ್ನು ಅದ್ದೂರಿಯಾಗಿ ಮತ್ತು ಯಶಸ್ವಿಯಾಗಿ ಆಚರಿಸಿದೆ.

ಸೃಜನಶೀಲತೆ, ಸಮುದಾಯ ಪ್ರಜ್ಞೆ, ಸುಸ್ಥಿರತೆಯನ್ನು ಸಂಭ್ರಮಿಸಿದ ಈ ಕಾರ್ಯಕ್ರಮದಲ್ಲಿ ನೂರಾರು ಮಂದಿ ಸ್ಥಳೀಯರು ಪಾಲ್ಗೊಂಡರು.

ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಕಲಾ ಸಂತೆ ನಡೆಯಿತು. 50ಕ್ಕೂ ಹೆಚ್ಚು ಸ್ಥಳೀಯ ಕಲಾವಿದರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಅದರಲ್ಲೂ ಜೋರ್ಡಿಂಡಿಯನ್ ತಂಡದ ಸ್ಟಾಂಡಪ್ ಕಾಮಿಡಿ ಪ್ರದರ್ಶನ ಮತ್ತು ಪ್ರಾಜೆಕ್ಟ್ ಮಲಬಾರಿಕಸ್‌ ತಂಡದ ಸಂಗೀತ ಕಾರ್ಯಕ್ರಮಗಳು ಭಾಗವಹಿಸಿದವರ ಗಮನ ಸೆಳೆದವು.

ಕೊಲಾಬ್‌ಹೌಸ್‌ನ ಸ್ಥಾಪಕರಾದ ಕಲಾವಿದೆ ಉರ್ಜಿತಾ ಶರ್ಮಾ ಅವರ ಮೂರು ಮಹತ್ವದ ಕಲಾಕೃತಿಗಳ ಸ್ಥಾಪನೆ ಈ ಕಾರ್ಯಕ್ರಮದ ವಿಶೇಷತೆಯಾಗಿತ್ತು. ಮೊದಲನೇದಾಗಿ 9-ಅಡಿ ಎತ್ತರದ ಲೋಹದಲ್ಲಿ ರಚಿಸಿರುವ ನಾಚಿಕೆ ಮುಳ್ಳು (ಟಚ್-ಮಿ-ನಾಟ್) ಕಲಾಕೃತಿಯನ್ನು ಪ್ರದರ್ಶಿಸಲಾಯಿತು. ನಗರೀಕರಣದಿಂದ ಪ್ರಕೃತಿ ಅವನತಿ ಹೊಂದುತ್ತಿರುವುದನ್ನು ಸಾಂಕೇತಿಕವಾಗಿ ಈ ಮೂಲಕ ಸಾರಲಾಯಿತು. ಎರಡನೆಯದಾಗಿ ಟ್ರೀ ಆಫ್ ಲೈಫ್ ಕಲಾಕೃತಿಯನ್ನು ಜನರ ಮುಂದೆ ಅನಾವರಣಗೊಳಿಸಲಾಯಿತು. ಈ ಟ್ರೀ ಆಫ್ ಲೈಫ್ ಕಲಾಕೃತಿ ಜನನ, ಬೆಳವಣಿಗೆ, ಸಾವು, ಪುನರ್ಜನ್ಮ ಮತ್ತು ಜ್ಞಾನವನ್ನು ಸಂಕೇತಿಸುತ್ತದೆ. ಅಂತಿಮವಾಗಿ ಬರ್ಡ್ಸ್ ಆಫ್ ಎ ಫ್ಲೋಕ್ ಕಲಾಕೃತಿ ಅನಾವರಣಗೊಳಿಸಲಾಯಿತು. ಈ ಕಲಾಕೃತಿ ಮಾನವನ ಮತ್ತು ನಿಸರ್ಗದ ಸಮನ್ವಯತೆಯ ಅಗತ್ಯವನ್ನು ಸಾರಿತು.

ಈ ಹಬ್ಬದ ಕುರಿತು ಮಾತನಾಡಿದ ಭಾರತದ ಬ್ರೂಕ್‌ಫೀಲ್ಡ್ ಪ್ರಾಪರ್ಟೀಸ್ ಸಿಓಓ ಶಂತನು ಚಕ್ರವರ್ತಿ ಅವರು, “ನಾವು ಇಕೋವರ್ಲ್ಡ್ ಬ್ರಾಂಡ್ ಅನ್ನು ಮರುಬಿಡುಗಡೆ ಮಾಡಲು ಖುಷಿಪಡುತ್ತಿದ್ದೇನೆ. ಇಕೋವರ್ಲ್ಡ್ ಹಬ್ಬ ಕೇವಲ ಒಂದು ಕಾರ್ಯಕ್ರಮ ಮಾತ್ರವೇ ಅಲ್ಲ, ಬದಲಿಗೆ ವ್ಯಾಪಾರ ಕ್ಷೇತ್ರವನ್ನು ಮೀರಿದ ಜಗತ್ತನ್ನು ಕಟ್ಟಿಕೊಡುವ ನಮ್ಮ ಪ್ರಯತ್ನವಾಗಿದೆ. ನಮ್ಮ ನಿವಾಸಿಗಳು, ಅವರ ಕುಟುಂಬಗಳು ಮತ್ತು ಒಟ್ಟಾರೆ ಬೆಂಗಳೂರಿನ ಜನರನ್ನು ಒಟ್ಟುಗೂಡಿಸುವ ಮೂಲಕ ನಾವು ಸೌಹಾರ್ದ ಭಾವನೆಯನ್ನು ಬೆಳೆಸುತ್ತಿದ್ದೇವೆ. ಈ ಕಾರ್ಯಕ್ರಮದ ಮೂಲಕ ಎಲ್ಲರನ್ನೂ ಒಳಗೊಂಡು ಒಂದು ಉತ್ತಮ ಸಂವಹನ ನಡೆಯುವಂತೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಈ ಪರಿಕಲ್ಪನೆಯನ್ನು ಬೇರೆ ನಗರಗಳಿಗೂ ಪರಿಚಯಿಸುತ್ತೇವೆ” ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News