ಮಲೆಯಾದ್ರಿ ಸಂಸ್ಕೃತಿ ಕೃತಿಗಳನ್ನು ನೀಡಿದ ಹೆಗ್ಗಳಿಕೆ ಹಾಡ್ಲಹಳ್ಳಿ ನಾಗರಾಜ್‍ರದ್ದು: ಡಾ.ಪುರುಷೋತ್ತಮ ಬಿಳಿಮಲೆ

Update: 2024-12-01 15:39 GMT

ಡಾ.ಪುರುಷೋತ್ತಮ ಬಿಳಿಮಲೆ

ಬೆಂಗಳೂರು : ಮಲೆನಾಡು-ತುಳುನಾಡು ಸಂಸ್ಕೃತಿಗಳೆಡರ ಸಮ್ಮಿಶ್ರಣದ ಸಂಸ್ಕೃತಿಯೇ ಮಲೆಯಾದ್ರಿ (ಹಾಸನ ಸಕಲೇಶ್ವರ ಅಸುಪಾಸು) ಆಗಿದ್ದು, ಇಂತಹ ಭಿನ್ನ ಸಂಸ್ಕೃತಿಯ ಬಗ್ಗೆ ಹಲವು ಕೃತಿಗಳನ್ನು ನೀಡಿದ ಹೆಗ್ಗಳಿಕೆ ಹಾಡ್ಲಹಳ್ಳಿ ನಾಗರಾಜ್‍ಗೆ ಸಲ್ಲುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ಹಾಡ್ಲಹಳ್ಳಿ ನಾಗರಾಜ್‍ರವರ ಆಪ್ತ ಬಳಗ ಮತ್ತು ಸಾಹಿತ್ಯಾಸಕ್ತರ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಹಾಡ್ಲಹಳ್ಳಿ ನಾಗರಾಜ್‍ರ ಅಭಿನಂದನಾ ಸಮಾರಂಭ ಹಾಗೂ ಕೃತಿ ಬಿಡುಗಡೆ ಮತ್ತು ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕುವೆಂಪು, ಶಿವರಾಮ ಕಾರಂತರ ಸಾಹಿತ್ಯದಂತೆಯೇ ಹಾಡ್ಲಹಳ್ಳಿ ನಾಗರಾಜ್‍ರ ಬರಹ ಶೈಲಿ ರೂಪುಗೊಂಡಿರುವುದು ಒಂದು ತರಹದ ಹೊಸ ಬಗೆಯೇ ಸರಿ. ಕುವೆಂಪು ಮಲೆನಾಡಿನ ಸಹ್ಯಾದ್ರಿ ಮಡಿಲಿನ ಬಗ್ಗೆ ವಿಭಿನ್ನ ಸಾಹಿತ್ಯವನ್ನು ಕನ್ನಡ ಸಾಹಿತ್ಯಕ್ಕೆ ನೀಡಿದರು, ಜೊತೆಗೆ ಶಿವರಾಮ ಕಾರಂತರು ಕರಾವಳಿ ಪ್ರದೇಶದ ಕುರಿತಾಗಿ ಸಾಹಿತ್ಯ ರಚನೆ ಮಾಡಿದ್ದು ವಿಶೇಷ ಎಂದರು.

ಹಾಗೆಯೇ ನಾಗರಾಜ್ ಅವರು ತಮ್ಮದೇ ಭೌಗೋಳಿಕ ವ್ಯವಸ್ಥೆಗೆನುಗುಣವಾಗಿ ಬರಹ ನೀಡಿರುವಿಕೆ ಕೂತುಹಲ ಮೂಡಿಸುತ್ತದೆ. ಅವರ ಒಟ್ಟಾರೆ ಕೃತಿಗಳು ಕನ್ನಡ ಸಾಹಿತ್ಯದಲ್ಲಿ ವಿಮರ್ಶೆ ಮಾಡಲು ಹೊಸ ಎಚ್ಚರ ಮಾನದಂಡಗಳನ್ನು ಅನುಸರಿಸುವಿಕೆ ಕುರಿತಾಗಿ ಎಚ್ಚರಿವಹಿಸಲೇಬೇಕಾಗಿದೆ ಎಂದು ಅವರು ಹೇಳಿದರು.

ನಾಗರಾಜ್ ಅವರ ಕೃತಿಗಳು ಬಾಲ್ಯ, ಬಾಲ್ಯ ನಂತರದ ತಮ್ಮ ವೃತ್ತಿ ಬದುಕಿನ ನಂತರ ತಾವು ಕಂಡ ಪ್ರಾಕೃತಿಕ ಪರಿಸರ ಸೇರಿದಂತೆ ನೆಲಮೂಲ ಸಂಸ್ಕೃತಿಗಳ ಬಗ್ಗೆ ವಿವರಿಸಿರುವ ಪರಿಯೇ ಅಚ್ಚುಕಟ್ಟಾಗಿದೆ ಎಂದು ಅವರು ಹೇಳಿದರು.

ನಾಟಕಕಾರ ಡಾ.ಬೇಲೂರು ರಘುನಂದನ್ ಮಾತನಾಡಿ, ಹಾಡ್ಲಹಳ್ಳಿ ನಾಗರಾಜ್ ಅವರ ಕೃತಿಗಳಲ್ಲಿ ಬಹುಮುಖ್ಯವಾಗಿ ಸಮಾಜ ಹಾಗೂ ವ್ಯವಸ್ಥೆಯನ್ನು ಕಟ್ಟುವ ವೈಖರಿಯ ಬರಹ ಶೈಲಿ ಮೂಡಿ ಬಂದಿರುವುದೇ ವೈಶಿಷ್ಟ್ಯಪೂರ್ಣ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಜಾಣಗೆರೆ ವೆಂಕಟರಾಮಯ್ಯ, ಸಾಹಿತಿ ಹಾಡ್ಲಹಳ್ಳಿ ನಾಗರಾಜ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ವಂದೇ ಮಾತರಂ ಧರ್ಮರಾಜ ಕಡಗ, ಉದ್ಯಮಿ ಜಾಗಟೆ ಇತರರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News