ಹೊಸಕೋಟೆ: ಗ್ರಾಮೀಣ ಭಾಗಗಳಿಗೆ ಹೊಸದಾಗಿ ಸಾರಿಗೆ ಸೌಲಭ್ಯ ಪ್ರಾರಂಭ

Update: 2024-02-05 18:16 GMT

ಬೆಂಗಳೂರು: ಹೊಸಕೋಟೆ ಗ್ರಾಮೀಣ ಭಾಗಗಳಿಗೆ ಸಮರ್ಪಕ ಬಸ್ ಸಂಚಾರಕ್ಕೆ ಸ್ಥಳೀಯರ ಆಗ್ರಹದ ಬಗ್ಗೆ ‘ವಾರ್ತಾಭಾರತಿ’ ಪತ್ರಿಕೆಯು ಪ್ರಕಟಿಸಿದ ವಿಶೇಷ ವರದಿಯನ್ನು ಆಧರಿಸಿ ಆ ಭಾಗಗಳಿಗೆ ಹೊಸದಾಗಿ ಸಾರಿಗೆ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕರು ತಿಳಿಸಿದ್ದಾರೆ.

ನಂದಗುಡಿಯಿಂದ ಹಳೇಯೂರು, ರಾಮಗೋವಿಂದಪುರ, ಇಟ್ಟಸಂದ್ರ, ಚೀಮಸಂದ್ರ, ಅನುಪಹಳ್ಳಿ ಮಾರ್ಗವಾಗಿ ಸೂಲಿಬೆಲೆ ಮೂಲಕ ಹೊಸಕೋಟೆಗೆ ಈ ಹಿಂದೆ ಬಸ್‌ಗಳು ಸಂಚರಿಸುತ್ತಿದ್ದವು. ಪ್ರಸ್ತುತ ಸಾರಿಗೆ ಸೌಲಭ್ಯವಿಲ್ಲದೇ ಸಾರ್ವಜನಿಕ ಪ್ರಯಾಣಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ನಡೆದುಕೊಂಡು ಹೋಗುತ್ತಿರುವ ಬಗ್ಗೆ ವಾರ್ತಾಭಾರತಿಯಲ್ಲಿ ಜ.17ರಂದು ‘ಹೊಸಕೋಟೆ-ಬೆಂಗಳೂರು ಗ್ರಾಮೀಣ ಬಸ್ ಸಂಚಾರ ಸ್ಥಗಿತ’-‘ಸಮರ್ಪಕ ಬಸ್ ಸಂಚಾರಕ್ಕೆ ಸ್ಥಳೀಯರ ಆಗ್ರಹ’ ಎಂಬ ಶೀರ್ಷಿಕೆಯಡಿ ವಿಶೇಷ ವರದಿಯು ಪ್ರಕಟವಾಗಿತ್ತು. ವಿಶೇಷ ವರದಿಯು ಪ್ರಕಟವಾಗಿರುವ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿ ಕ್ರಮಕೈಗೊಂಡಿದ್ದಾರೆ.

ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹೊಸಕೋಟೆಯಿಂದ, ಸೂಲಿಬೆಲೆ, ಬೆಂಡಿಗಾನಹಳ್ಳಿ, ಅನುಪನಹಳ್ಳಿ, ರಾಮಗೋವಿಂದಪುರ, ನಂದಗುಡಿ ಮಾರ್ಗವಾಗಿ ಬೈಲನರಸಾಪುರದವರೆಗೆ ಹೊಸದಾಗಿ ಸಾರಿಗೆ ಸೌಲಭ್ಯವನ್ನು ಫೆ.1ರಿಂದ ಪ್ರಾರಂಭಿಸಲಾಗಿದೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News