ನಾಳೆಯಿಂದ(ಮಾ.15) ಬೆಂಗಳೂರು ವಿವಿಯಲ್ಲಿ ಅಂತಾರಾಷ್ಟ್ರೀಯ ‘ವಿಜ್ಞಾನ ಸಮ್ಮೇಳನ’

Update: 2024-03-14 13:41 GMT

ಬೆಂಗಳೂರು: ಬೆಂಗಳೂರು ವಿಶ್ವ ವಿದ್ಯಾನಿಲಯ ಸೈನ್ಸ್ ಫೋರಂ ವತಿಯಿಂದ ನಾಳೆ(ಮಾ.15) ಮತ್ತು 16ರಂದು ಅಂತಾ ರಾಷ್ಟ್ರೀಯ ವಿಜ್ಞಾನ ಸಮ್ಮೇಳನವನ್ನು ಆಯೋಜಿಸಿದೆ.

ಗುರವಾರ ಪ್ರಕಟಣೆ ನೀಡಿರುವ ಬೆಂವಿವಿ, ಜ್ಞಾನಭಾರತಿ ಆವರಣದ ವಿಜ್ಞಾನ ವಿಭಾಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಸಂವಾದ, ಚರ್ಚೆಗಳನ್ನು ಏರ್ಪಡಿಸಲಾಗಿದೆ. ಎರಡು ದಿನಗಳ ಸಮ್ಮೇಳನದಲ್ಲಿ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ಮಾಡೆಲ್‍ಗಳ ಪ್ರದರ್ಶನ, ರಸಪ್ರಶ್ನೆ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಪೋಸ್ಟರ್ ಪ್ರೆಸೆಂಟೆಷನ್ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು 1,500ಕ್ಕೂ ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿದ್ದಾರೆ. ಸಮ್ಮೇಳನದಲ್ಲಿ 6ಕ್ಕೂ ಹೆಚ್ಚು ದೇಶಗಳ, 14ಕ್ಕೂ ಹೆಚ್ಚು ರಾಜ್ಯಗಳ, ವಿವಿಧ ವಿವಿಗಳ ವಿದ್ಯಾರ್ಥಿಗಳು, ವಿಷಯ ತಜ್ಞರು, ಆಹ್ವಾನಿತರು ಭಾಗಿಯಾಗಲಿದ್ದಾರೆ. ಕಾರ್ಯಕ್ರಮದಲ್ಲಿ ಎನ್‍ಆರ್‌ ಎಸ್‍ಸಿ ಅಧ್ಯಕ್ಷ ಡಾ.ಪ್ರಕಾಶ್ ಚೌಹಾನ್, ಪುಣೆ ವಿವಿ ಪ್ರಾಧ್ಯಾಪಕ ಡಾ.ರವೀಂದ್ರ ಜಿ. ಜಯಬಯೆ, ಸಿಇಪಿಟಿ ವಿವಿ ಪ್ರಾಧ್ಯಾಪಕಿ ಡಾ.ಅಂಜನಾ ವ್ಯಾಸ್ ರವರಿಗೆ ‘ಯುಜಿಐಟಿ ಎಕ್ಸ್ಲೆನ್ಸಿ ಅವಾರ್ಡ್’ ನೀಡಿ ಸನ್ಮಾನಿಸಲಾಗುವುದು. ಕಾರ್ಯಕ್ರಮದಲ್ಲಿ ಕುಲಪತಿ ಡಾ.ಜಯಕರ ಎಸ್.ಎಂ., ಕುಲಸಚಿವ ಶೇಕ್ ಲತೀಫ್, ಡೀನ್ ಅಶೋಕ್ ಡಿ. ಹಂಜಗಿ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News