ಪೊಲೀಸ್ ಗೌರವಗಳೊಂದಿಗೆ ಲಕ್ಷ್ಮೀನಾರಾಯಣ ನಾಗವಾರ ಅಂತ್ಯಕ್ರಿಯೆ
Update: 2025-01-01 15:42 GMT
ಬೆಂಗಳೂರು: ದಲಿತ ಚಳುವಳಿಯ ಹಿರಿಯ ನಾಯಕ ಲಕ್ಷ್ಮೀನಾರಾಯಣ ನಾಗವಾರ ಮಂಗಳವಾರ(ಡಿ.31) ನಿಧನರಾಗಿದ್ದು, ಬುಧವಾರದಂದು(ಜ.1) ಇಲ್ಲಿನ ನಾಗವಾರದಲ್ಲಿ ಪೊಲೀಸ್ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ. ಮಹದೇವಪ್ಪ ಸೇರಿದಂತೆ ಮತ್ತಿತರರು ಗಣ್ಯರು ಅಂತಿಮ ನಮನ ಸಲ್ಲಿಸಿದರು.