ಬೆಂಗಳೂರು | ಆಟೊ ಚಾಲಕನ ವರ್ತನೆಗೆ ಹೆದರಿ ಜಿಗಿದ ಮಹಿಳೆ
Update: 2025-01-03 17:38 GMT
ಬೆಂಗಳೂರು : ಚಾಲಕನ ವರ್ತನೆಗೆ ಹೆದರಿದ ಮಹಿಳೆಯೊಬ್ಬರು ಆಟೊದಿಂದ ಜಿಗಿದು ಪಾರಾಗಿರುವ ಘಟನೆ ಬೆಳಕಿಗೆ ಬಂದಿದೆ.
ಹೊರಮಾವಿನಿಂದ ಥಣಿಸಂದ್ರಗೆ ಹೋಗಲು ಮಹಿಳೆಯೊಬ್ಬರು ರಾತ್ರಿ ಆಟೊ ಬುಕ್ ಮಾಡಿದ್ದಾರೆ. ಆಟೊ ಬಂದಾಗ ಈ ಮಹಿಳೆ ಹತ್ತಿದ್ದಾರೆ. ಮಾರ್ಗ ಮಧ್ಯೆ ಆಟೊ ಚಾಲಕ ಬೇರೆ ಜಾಗಕ್ಕೆ ಕರೆದುಕೊಂಡು ಹೋಗುತ್ತಿರುವ ಬಗ್ಗೆ ಮಹಿಳೆಗೆ ಅರಿವಾಗಿದೆ. ತಕ್ಷಣ ಆಕೆ ಆಟೊ ನಿಲ್ಲುಸುವಂತೆ ಹೇಳಿದರೂ ಚಾಲಕ ನಿಲ್ಲಿಸಿಲ್ಲ ಎನ್ನಲಾಗಿದೆ.
ಮದ್ಯ ಸೇವಿಸಿದ್ದ ಚಾಲಕನ ವರ್ತನೆಯಿಂದ ಭಯಗೊಂಡ ಮಹಿಳೆ ಮುಂದೇನು ಮಾಡುವುದೆಂದು ಯೋಚಿಸಿ ಹೆಬ್ಬಾಳದ ವೀರಣ್ಣಪಾಳ್ಯ ಬಳಿ ತಕ್ಷಣ ಆಟೊದಿಂದ ಹೊರಗೆ ಜಿಗಿದು ತನ್ನನ್ನು ರಕ್ಷಿಸಿಕೊಂಡಿದ್ದಾರೆ. ಆನಂತರ, ಮಹಿಳೆಯ ಪತಿ ಆಟೊ ನೊಂದಣಿ ಸಂಖ್ಯೆ ಸಹಿತ ಬೆಂಗಳೂರು ನಗರ ಪೊಲೀಸರ ಎಕ್ಸ್ ಖಾತೆಯಲ್ಲಿ ಟ್ಯಾಗ್ ಮಾಡಿ ದೂರು ನೀಡಿದ್ದಾರೆ.