ಬೆಂಗಳೂರು | ವಶಕ್ಕೆ ಪಡೆದ ಆಟೊ ನೀಡಲು ಲಂಚ ಆರೋಪ : ಎಎಸ್ಸೈ ಸೇರಿ ಇಬ್ಬರು ಲೋಕಾಯುಕ್ತ ಬಲೆಗೆ
Update: 2025-01-05 13:36 GMT
ಬೆಂಗಳೂರು : ಕಾನೂನು ಬಾಹಿರವಾಗಿ ವಶಕ್ಕೆ ಪಡೆದಿದ್ದ ಆಟೊ ಹಿಂದಿರುಗಿಸಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಆರೋಪದ ಮೇಲೆ ಸಂಜಯನಗರ ಪೊಲೀಸ್ ಠಾಣೆಯ ಎಎಸ್ಸೈ ವಿಜಯ್ ಕುಮಾರ್ ಸೇರಿ ಇಬ್ಬರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ಕೆಜಿ ಹಳ್ಳಿಯ ನಿವಾಸಿಯೊಬ್ಬರಿಂದ ಜಪ್ತಿ ಮಾಡಿದ್ದ ಆಟೋ ಬಿಡುಗಡೆಗಾಗಿ ಎಸ್ಸೈ ವಿಜಯ್ ಕುಮಾರ್ 50 ಸಾವಿರ ರೂ. ಲಂಚ ನೀಡುವಂತೆ ಬೇಡಿಕೆಯಿಟ್ಟಿರುವ ಬಗ್ಗೆ ದೂರು ದಾಖಲಾಗಿತ್ತು. ಅದರಂತೆ ಕಾರ್ಯಾಚರಣೆ ಕೈಗೊಂಡ ಲೋಕಾಯುಕ್ತ ಪೊಲೀಸರು, ವಿಜಯ್ ಕುಮಾರ್ ಹಾಗೂ ಅವರ ಪರವಾಗಿ 40 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ರಿಝ್ವಾನ್‍ನನ್ನು ಬಂಧಿಸಿದ್ದಾರೆ.