ಮುಡಾ ಪ್ರಕರಣ | ದಾಖಲಾತಿ ತಿದ್ದುವ ಪರಿಸ್ಥಿತಿ ಬಂದಿಲ್ಲ : ಸಚಿವ ಭೈರತಿ ಸುರೇಶ್

Update: 2024-08-21 15:17 GMT

ಬೆಂಗಳೂರು: ಮುಡಾ ಬದಲಿ ನಿವೇಶನ ಪ್ರಕರಣ ಸಂಬಂಧ ದಾಖಲಾತಿ ತಿದ್ದುವ ಪರಿಸ್ಥಿತಿ ನಮಗೆ ಬಂದಿಲ್ಲ. ಮುಖ್ಯಮಂತ್ರಿ ಪತ್ನಿ ಅವರ ದಾಖಲಾತಿ ತಿದ್ದುಪಡಿ ಆಗಿಲ್ಲ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಸ್ಪಷ್ಟನೆ ನೀಡಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮೀನಿಗೆ ಪರಿಹಾರ ನೀಡಿಲ್ಲ. ಅಷ್ಟೇ ವಿಸ್ತೀರ್ಣದ ಜಮೀನು ಎಂದು ಹೇಳಿದ್ದಾರೆ. ಅಲ್ಲಿ ವರ್ಷ ತಪ್ಪಾಗಿರಬಹುದು. ಇಲ್ಲವೇ ಸಮಾನಾಂತರ ಬಡಾವಣೆಯಲ್ಲಿ ನೀಡುವಂತೆ ಕೋರುತ್ತೇನೆ ಎಂದು ಬಹಳ ಸ್ಪಷ್ಟವಾಗಿಯೇ ಹೇಳಿದ್ದಾರೆ. ವಿಜಯನಗರ ಲೇಔಟ್‍ನಲ್ಲಿ ಎಂದು ಎಲ್ಲಿ ಬರೆದಿದ್ದಾರೆ? ಸಮಾನಾಂತರ ಜಾಗದಲ್ಲಿ ಎಂದು ಉಲ್ಲೇಖಿಸಲಾಗಿದೆ ಎಂದು ವಿವರಿಸಿದರು.

ಕುಮಾರಸ್ವಾಮಿ ಬಳಿ ಏನೆ ದಾಖಲೆ ಇದ್ದರೂ ಕೋರ್ಟ್‍ಗೆ ಕೊಡಿ. ಅದನ್ನು ಬಿಟ್ಟು ಅಪ ಪ್ರಚಾರ ಮಾಡುತ್ತೀರಿ. ನ್ಯಾಯಾಧೀಶರೇ ನಾವು ಬಗೆಹರಿಸುತ್ತೇವೆ ಎಂದಿದ್ದಾರೆ. ಅಲ್ಲಿಯವರೆಗೆ ಕಾಯೋಕೆ ಏನು ಎಂದ ಅವರು, ದಾಖಲೆ ತಿದ್ದುವಂತ ಪರಿಸ್ಥಿತಿ ನಮಗೆ ಬಂದಿಲ್ಲ. ಇಂತಹ ನೀಚ ಕೆಲಸಕ್ಕೆ ನಾವ್ಯಾರೂ ಇಳಿದಿಲ್ಲ ಎಂದು ವಾಗ್ದಾಳಿ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News