ಸಚಿವ ಈಶ್ವರ್ ಖಂಡ್ರೆ ಆಪ್ತನೆಂದು ನಂಬಿಸಿ ವಂಚನೆ : ದೂರು

Update: 2025-01-11 14:05 GMT

ಬೆಂಗಳೂರು : ಅರಣ್ಯ ಸಚಿವ ಈಶ್ವರ್ ಖಂಡ್ರೆ ಆಪ್ತನೆಂದು ನಂಬಿಸಿ ಸರಕಾರಿ ಉದ್ಯೋಗ ಕೊಡಿಸುವುದಾಗಿ ಹಣ ಪಡೆದು ವಂಚಿಸಿರುವ ಆರೋಪದಡಿ ಇಲ್ಲಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ವೀರೇಶ್ ಕೆ.ಪಿ.ಎಂಬಾತನ ವಿರುದ್ಧ ಮೊಕದ್ದಮೆ ದಾಖಲಾಗಿದೆ.

ರಾಣೆಬೆನ್ನೂರು ಮೂಲದ ಪಿ.ಎಚ್.ಅಡವಿ ಎಂಬವರಿಗೆ ಕೆಲಸ ಕೊಡಿಸುವುದಾಗಿ 6 ಲಕ್ಷ ರೂ. ಪಡೆದು ವಂಚಿಸಿರುವ ಆರೋಪದಡಿ ವೀರೇಶ್ ಕೆ.ಪಿ ಎಂಬಾತನ ವಿರುದ್ಧ ದೂರು ದಾಖಲಿಸಿಕೊಂಡಿದ್ದು, ಈ ಸಂಬಂಧ ತನಿಖೆ ಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ.

ಪಿಎಚ್ ಅಡವಿ ಅವರಿಗೆ ವೀರೇಶ್ ಪರಿಚಯವಾಗಿದ್ದು, ತಾನು ಅರಣ್ಯ ಸಚಿವರ ಆಪ್ತ ಎಂದು ಹೇಳಿಕೊಂಡಿದ್ದ ವೀರೇಶ್, ಅರಣ್ಯ ರಕ್ಷಕ ಹಾಗೂ ಅರಣ್ಯ ವೀಕ್ಷಕ ಹುದ್ದೆ ಕೊಡಿಸುತ್ತೇನೆ ಎಂದು ನಂಬಿಸಿ ಹಂತ ಹಂತವಾಗಿ 6 ಲಕ್ಷ ರೂ. ಹಣವನ್ನು ಪಡೆದುಕೊಂಡಿದ್ದಾನೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಆದರೆ, ಹಣ ಪಡೆದು ಒಂದು ವರ್ಷ ಕಳೆದರೂ ಸಹ ಕೆಲಸ ಕೊಡಿಸದಿದ್ದಾಗ ಅನುಮಾನಗೊಂಡು ವಿರೇಶ್‍ನನ್ನು ವಿಚಾರಿಸಿದಾಗ ತಾವು ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಈ ಬಗ್ಗೆ ವೀರೇಶ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿಧಾನಸೌಧ ಪೊಲೀಸ್ ಠಾಣೆಗೆ ಅಡವಿ ದೂರು ನೀಡಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News