ಬೆಂಗಳೂರು | ಪತಿಯಿಂದಲೇ ಪತ್ನಿ, ಇಬ್ಬರು ಮಕ್ಕಳ ಬರ್ಬರ ಹತ್ಯೆ: ಆರೋಪಿಯ ಬಂಧನ
ಬೆಂಗಳೂರು : ಪತಿಯಿಂದಲೇ ಪತ್ನಿ ಹಾಗೂ ಇಬ್ಬರು ಮಕ್ಕಳ ಬರ್ಬರ ಹತ್ಯೆ ಮಾಡಿರುವ ಭೀಕರ ಘಟನೆ ಬೆಂಗಳೂರಿನ ಜಾಲಹಳ್ಳಿ ಕ್ರಾಸ್ ಬಳಿಯಲ್ಲಿನ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಹತ್ಯೆಗೀಡಾದವರನ್ನು ಪತ್ನಿ ಭಾಗ್ಯ(38), ಭಾಗ್ಯ ಅಕ್ಕನ ಮಗಳು ಹೇಮಾವತಿ ಮತ್ತು ಮಗಳು ನವ್ಯಾ ಎಂದು ಗುರುತಿಸಲಾಗಿದೆ. ಆರೋಪಿ ಹೋಂ ಗಾರ್ಡ್ ಆಗಿರುವ ಪತಿ ಗಂಗರಾಜುನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಮೂವರ ಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಭಾಗ್ಯ, ಆಕೆಯ ಮಗಳು ನವ್ಯ, ಸಂಬಂಧಿ ಹೇಮಾವತಿ ಎಂಬುವವರ ಕೊಲೆಯಾಗಿದೆ. ಒಂದೇ ಕೊಣೆಯಲ್ಲಿ ಕೊಲೆ ಮಾಡಲಾಗಿದೆ. ಗಂಗರಾಜು ಎಂಬಾತನಿಂದ ಕೊಲೆ ನಡೆದಿದೆ. ಗಂಗರಾಜು ಕೊಲೆಯಾದ ಭಾಗ್ಯ ಗಂಡ ಎಂದು ಗೊತ್ತಾಗಿದೆ.
ಆರೋಪಿ ಕೊಲೆ ಮಾಡಿದ ಬಳಿಕ ಆಯುಧದ ಸಮೇತ ಆತನೇ ಠಾಣೆಗೆ ಬಂದು ಶರಣಾಗಿದ್ದಾನೆ. ಮೂಲತಃ ಇವರು ನೆಲಮಂಗಲದವರು. ಆರು ವರ್ಷದಿಂದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಯಾಕೆ ಕೊಲೆ ಮಾಡಿದ್ದಾನೆಂಬ ಬಗ್ಗೆ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆಂದು ತಿಳಿದು ಬಂದಿದೆ.