ರಾಜ್ಯ ಮಾಧ್ಯಮ ಮಾನ್ಯತಾ ಸಮಿತಿ ಪುನರ್ ರಚನೆ
ಬೆಂಗಳೂರು : ರಾಜ್ಯ ಸರಕಾರವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹೇಮಂತ್ ಎಂ.ನಿಂಬಾಳ್ಕರ್ ಅಧ್ಯಕ್ಷತೆಯಲ್ಲಿ ರಾಜ್ಯ ಮಾಧ್ಯಮ ಮಾನ್ಯತಾ ಸಮತಿಯನ್ನು 2024ರ ಡಿ.1ರಿಂದ ಜಾರಿಗೆ ಬರುವಂತೆ ಎರಡು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಯಾವುದು ಮೊದಲೋ ಅಲ್ಲಿಯವರೆಗೆ ರಚಿಸಿ ಆದೇಶ ಹೊರಡಿಸಿದೆ.
ಸಮಿತಿಯ ಸದಸ್ಯರನ್ನಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರು/ಜಂಟಿ ನಿರ್ದೇಶಕರು(ಸುದ್ದಿ ಮತ್ತು ಪತ್ರಿಕಾ ಶಾಖೆ), ಸರಕಾರದಿಂದ ನಾಮ ನಿರ್ದೇಶಿತರಾದ ಸಂಜೆ ದರ್ಪಣ ದಿನಪತ್ರಿಕೆಯ ಸಂಪಾದಕ ಗಣಪತಿ ಗಂಗೊಳ್ಳಿ, ಈ ಸಂಜೆ ಹಿರಿಯ ವರದಿಗಾರ ಶಿವಣ್ಣ, ಕನ್ನಡ ಬಂಧು ದಿನಪತ್ರಿಕೆಯ ಸಂಪಾದಕ ಗುರುರಾಜ ಕುಲಕರ್ಣಿ, ಪಬ್ಲಿಕ್ ಟಿವಿಯ ಪ್ರಧಾನ ವರದಿಗಾರ ಡಿ.ಎಚ್.ಸುಕೇಶ್ ಅವರನ್ನು ಸರಕಾರದಿಂದ ನಾಮ ನಿರ್ದೇಶನ ಮಾಡಲಾಗಿದೆ.
ಬೆಂಗಳೂರು ಛಾಯಾಗ್ರಾಹಕ ಒಕ್ಕೂಟದ ಪ್ರತಿನಿಧಿಯಾಗಿ ಹಿರಿಯ ಛಾಯಾಗ್ರಾಹಕ ಶೈಲೇಂದ್ರ ಭೋಜಕ್, ಸರಕಾರದಿಂದ ನೇಮಿಸಲ್ಪಟ್ಟ ಪ್ರತಿನಿಧಿಗಳಾಗಿ ಶೀಕಾಂತ ಯಮನಪ್ಪ ಕುಬಕಡ್ಡಿ(ಎಸ್.ಸಿ), ವಿಜಯ ಕರ್ನಾಟಕ ಹಿರಿಯ ವರದಿಗಾರ ಯಳನಾಡು ಮಂಜು(ಎಸ್.ಟಿ), ಸಂಯುಕ್ತ ಕರ್ನಾಟಕ ಹಿರಿಯ ವರದಿಗಾರ್ತಿ ಕೀರ್ತನಾ ಕುಮಾರಿ ಕೆ.(ಮಹಿಳಾ ಪ್ರತಿನಿಧಿ), ಯಾಸಿರ್ ಮುಷ್ತಾಕ್(ಸಾಮಾನ್ಯ ಪ್ರತಿನಿಧಿ), ಶಶಿಕುಮಾರ್ ಡಿ.(ಹಿಂದುಳಿದ ವರ್ಗ) ಹಾಗೂ ಡಾ.ವಾಸು ಎಚ್.ವಿ.(ಡಿಜಿಟಲ್ ಮೀಡಿಯಾ) ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.