ವಾಲ್ಮೀಕಿ ನಿಗಮದ ಹಗರಣ | ಎಸ್‌ಐಟಿ ವಶಪಡಿಸಿಕೊಂಡ ಹಣದ ವಿವರ ನೀಡಿದ ಸಿಎಂ

Update: 2024-07-19 14:50 GMT

ಬೆಂಗಳೂರು : ವಾಲ್ಮೀಕಿ ನಿಗಮದಲ್ಲಿನ ಅಕ್ರಮ ಸಂಬಂಧ ಎಸ್‍ಐಟಿ ಅಧಿಕಾರಿಗಳು ತನಿಖೆ ನಡೆಸಿದ್ದು, ಆ ತನಿಖೆಯ ಮೇಲೆ ಸರಕಾರಕ್ಕೆ ಸಂಪೂರ್ಣ ವಿಶ್ವಾಸವಿದೆ. 217 ವಿವಿಧ ಬ್ಯಾಂಕ್‍ಗಳ ಖಾತೆಗಳನ್ನು ಗುರುತಿಸಿ ಅವುಗಳಲ್ಲಿದ್ದ 13.72 ಕೋಟಿ ರೂ.ಹಣದ ವಹಿವಾಟು ಸ್ಥಗಿತಗೊಳಿಸಿದ್ದು, ಈ ಮೂಲಕ ಪ್ರಕರಣದಲ್ಲಿ ಒಟ್ಟು 85.25ಕೋಟಿ ರೂ.ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿವರಿಸಿದ್ದಾರೆ.

ಶುಕ್ರವಾರ ವಿಧಾಶನಸಭೆಯ ಕಲಾಪದಲ್ಲಿ ವಾಲ್ಮೀಕಿ ನಿಗಮದ ಪ್ರಕರಣ ಸಂಬಂಧ ಸುದೀರ್ಘ ಉತ್ತರವನ್ನು ಮಂಡಿಸಿದ ಅವರು, ಸಿಟ್ ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿದ್ದು, ಈಗಾಗಲೇ ನಿಗಮದ ಖಾತೆಯಿಂದ ವರ್ಗಾವಣೆ ಆದ ಹಣವನ್ನು ವಾಪಸ್ ವಶಪಡಿಸಿಕೊಳ್ಳುವ ಕಾರ್ಯನಡೆಯುತ್ತಿದೆ ಎಂದರು.

ಈ ಪ್ರಕರಣದಲ್ಲಿ ಭಾಗಿಯಾಗಿರುವ ಸತ್ಯನಾರಾಯಣ ವರ್ಮಾ ಮತ್ತು ಇತರೆ ಆರೋಪಿಗಳು ಅಕ್ರಮವಾಗಿ ಬೇರೆ ವ್ಯಕ್ತಿಗಳ ಖಾತೆಗಳಿಗೆ ವರ್ಗಾಯಿಸಿದ್ದ 1.50 ಕೋಟಿ ರೂ. ಹಣವನ್ನು ಜನರೇ ವಾಪಾಸ್ ಕಟ್ಟಿದ್ದಾರೆ. ಆ ಹಣ ಸರಕಾರದಲ್ಲಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಲ್ಯಾಂಬೋರ್ಗಿನಿ ಕಾರು ಖರೀದಿಸಿದ್ದ ಆರೋಪಿ: ಆರೋಪಿ ಸತ್ಯನಾರಾಯಣ ವರ್ಮಾ ಲ್ಯಾಂಬೋರ್ಗಿನಿ ಉರಸ್ ಎಂಬ ಕಾರನ್ನು ಬಿಗ್‍ಬಾಯ್ಸ್ ಟಾಯ್ಸ್ ಲಿ.ಕಂಪೆನಿ ಮೂಲಕ ಖರೀದಿ ಮಾಡಿದ್ದ. ಈಗ ಆ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಂಪೆನಿಯು ಕಾರನ್ನು ವಾಪಸ್ ಪಡೆದು 3.31 ಕೋಟಿ ರೂ. ಹಣವನ್ನು ಸರಕಾರಕ್ಕೆ ಮರಳಿಸುವುದಾಗಿ ಸಂಬಂಧಿತ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

1.21ಕೋಟಿ ರೂ.ಬೆಂಝ್ ಕಾರು ಖರೀದಿ: ಇದೇ ಸತ್ಯನಾರಾಯಣ ವರ್ಮಾ 1.21ಕೋಟಿ ರೂ.ಗೂ ಹೆಚ್ಚು ಬೆಲೆಬಾಳುವ ಬೆಂಝ್ ಕಾರನ್ನು ಖರೀದಿಸಿದ್ದು, ಈ ಬಗ್ಗೆ ತನಿಖೆಯಲ್ಲಿ ಗೊತ್ತಾದ ಬಳಿಕ ಎಸ್‌ಐಟಿ ಅಧಿಕಾರಿಗಳು ಈ ಕಾರನ್ನು ವಶಕ್ಕೆ ಪಡೆದಿದ್ದಾರೆ. ಈ ಕಾರನ್ನೂ ಮರಳಿ ಕಂಪೆನಿಗೆ ನೀಡಿ ಅದರ ಮೌಲ್ಯವನ್ನು ವಾಪಸ್ ಪಡೆಯುವ ಪ್ರಕ್ರಿಯೆ ಚಾಲನೆಯಲ್ಲಿದೆ. ಅಲ್ಲದೆ, ಅಕ್ರಮವಾಗಿ ವರ್ಗಾವಣೆಯಾಗಿದ್ದ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಿಂದ(ರತ್ನಾಕರ್ ಬ್ಯಾಂಕ್) ನಿಗಮದ ಖಾತೆಗೆ 5 ಕೋಟಿ ರೂ.ಮರಳಿಸಿರುತ್ತಾರೆ ಎಂದು ಸಿದ್ದರಾಮಯ್ಯ ವಿವರಿಸಿದರು.

ಯೂನಿಯನ್ ಬ್ಯಾಂಕ್‍ನಿಂದ ಅಕ್ರಮವಾಗಿ ಹಣ ವರ್ಗಾವಣೆಯಾಗಿದ್ದ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 46.00 ಕೋಟಿಗೂ ಹೆಚ್ಚು ಹಣ ರತ್ನಾಕರ್ ಬ್ಯಾಂಕ್ ಲಿ.ನಲ್ಲಿದೆ. ಈ ಹಣವನ್ನು ನಮ್ಮ ಎಸ್‌ಐಟಿ ಅಧಿಕಾರಿಗಳ ತಂಡವು ಸ್ಥಗಿತಗೊಳಿಸಿರುತ್ತದೆ. ಅದನ್ನು ಹಿಂಪಡೆಯುವ ಪ್ರಕ್ರಿಯೆ ಪ್ರಾರಂಭಿಸಲಾಗುತ್ತಿದೆ. ಈ ಮೂಲಕ ಪ್ರಕರಣದಲ್ಲಿ ಒಟ್ಟಾರೆ 85,25,07,698 ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು.

ಯಾರಿಂದ ಎಷ್ಟೆಷ್ಟು ವಶಕ್ಕೆ?:

ಸತ್ಯನಾರಾಯಣ ವರ್ಮಾ- 8,21 ಕೋಟಿ ರೂ.

ಪದ್ಮನಾಭ ಜೆ.ಜಿ.- 3. 62 ಕೋಟಿ ರೂ.

ಪದ್ಮನಾಭ ಜೆ.ಜಿ - 30 ಕೋಟಿ ರೂ.

ನಾಗೇಶ್ವರ ರಾವ್ - 1.49 ಕೋಟಿ ರೂ.

ಚಂದ್ರಮೋಹನ್ - 30 ಕೋಟಿ ರೂ.

ಜಿ.ಕೆ. ಜಗದೀಶ್ - 12.50 ಕೋಟಿ ರೂ.

ಸತ್ಯನಾರಾಯಣ ವರ್ಮಾ - 3.10 ಕೋಟಿ ರೂ.

ಸತ್ಯನಾರಾಯಣ ವರ್ಮಾ - 24 ಕೋಟಿ ರೂ.

ಚಂದ್ರಮೋಹನ್ - 9 -207 ಗ್ರಾಂ ಚಿನ್ನ, ಮೌಲ್ಯ- 13.50 ಕೋಟಿ ರೂ.

ಜಿ.ಕೆ. ಜಗದೀಶ್ - 10- 47.6 ಗ್ರಾಂ ಚಿನ್ನ, ಮೌಲ್ಯ- 3.09 ಕೋಟಿ ರೂ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News