ಪರಿಷತ್ತಿನಲ್ಲಿ ಕರ್ನಾಟಕ ಸೌಹಾರ್ಧ ಸಹಕಾರಿ(ತಿದ್ದುಪಡಿ) ವಿಧೇಯಕಕ್ಕೆ ವಿರೋಧ

Update: 2024-02-21 15:07 GMT

ಬೆಂಗಳೂರು : ಕರ್ನಾಟಕ ಸೌಹಾರ್ಧ ಸಹಕಾರಿ ತಿದ್ದುಪಡಿ ವಿಧೇಯಕ-2024 ಅನ್ನು ಬುಧವಾರದಂದು ಪರಿಷತ್ತಿನಲ್ಲಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಂಡಿಸಿದ್ದು, ಬಿಜೆಪಿ ಮತ್ತು ಜೆಡಿಎಸ್ ಸದಸ್ಯರ ಒತ್ತಾಯದ ಮೇರೆಗೆ ವಿಧೇಯಕವನ್ನು ಪರಿಷತ್ತಿನ ಉಪಸಭಾಪತಿ ಪ್ರಾಣೇಶ್ ಪರಿಶೀಲನಾ ಸಮಿತಿಗೆ ಹಾಕಿದರು.

ವಿಧಾನಸಭೆಯಲ್ಲಿ ಮಂಡನೆಯಾಗಿ ಅಂಗೀಕಾರಗೊಂಡ ಕರ್ನಾಟಕ ಸೌಹಾರ್ಧ ಸಹಕಾರಿ (ತಿದ್ದುಪಡಿ) ವಿಧೇಯಕ-2024 ವಿಧೇಯಕವನ್ನು ಸಹಕಾರ ಸಚಿವ ಕೆ.ಎನ್.ರಾಜಣ್ಣ ಪರಿಷತ್‍ನಲ್ಲಿ ಮಂಡಿಸಿ ಚರ್ಚೆ ಆರಂಬಿಸಿದರು. ಆರಂಭದಲ್ಲಿಯೇ ಬಿಜೆಪಿ-ಜೆಡಿಎಸ್ ಸದಸ್ಯರು ಪರಿಶೀಲನಾ ಸಮಿತಿ ರಚನೆ ಮಾಡಿದ ಬಳಿಕ ವಿಧೇಯಕ ಮಂಡನೆ ಮಾಡುವಂತೆ ಪಟ್ಟು ಹಿಡಿದರು. ಆದರೆ, ಕಾಂಗ್ರೆಸ್ ನಾಯಕರು ಪರಿಶೀಲನಾ ಸಮಿತಿ ಬೇಕಿಲ್ಲ ವಿಧೇಯಕವನ್ನು ಪಾಸ್ ಮಾಡಿ ಎಂದು ಆಗ್ರಹಿಸಿದರು.

ಈ ಹಿನ್ನೆಲೆಯಲ್ಲಿ ಪರಿಷತ್ ಉಪ ಸಭಾಪತಿ ಪ್ರಾಣೇಶ್, ವಿರೋಧ ಪಕ್ಷದವರ ಅಭಿಪ್ರಾಯದಂತೆ ಮಸೂದೆಯನ್ನು ಮತಕ್ಕೆ ಹಾಕಿದರು. ವಿಧೇಯಕವನ್ನು ಪರಿಶೀಲನಾ ಸಮಿತಿಗೆ ಹಾಕುವ ಪ್ರಸ್ತಾವನೆ ಪರವಾಗಿ ಬಿಜೆಪಿ- ಜೆಡಿಎಸ್ ಸದಸ್ಯರ 33 ಮತಗಳು ಚಲಾವಣೆ ಆದವು. ವಿಧೇಯಕವನ್ನು ಪರಿಶೀಲನಾ ಸಮಿತಿ ಹಾಕುವ ಪ್ರಸ್ತಾವನೆ ವಿರೋಧವಾಗಿ ಆಡಳಿತ ಪಕ್ಷ ಕಾಂಗ್ರೆಸ್ ಸದಸ್ಯರ 21ಮತಗಳು ಚಲಾವಣೆ ಆದವು. ಹೀಗಾಗಿ, ಸೌಹಾರ್ಧ ಸಹಕಾರಿ ತಿದ್ದುಪಡಿ ವಿಧೇಯಕ-2024 ಅನ್ನು ಉಪಸಭಾಪತಿ ಪ್ರಾಣೇಶ್ ಪರಿಶೀಲನಾ ಸಮಿತಿಗೆ ಹಾಕಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News