ತೊಗರಿ ಬೆಂಬಲ ಬೆಲೆ ಖರೀದಿಗೆ ಪ್ರೋತ್ಸಾಹಕ್ಕಾಗಿ 140 ಕೋಟಿ ರೂ.: ಶಿವಾನಂದ ಪಾಟೀಲ್

Update: 2025-03-10 13:37 IST
ತೊಗರಿ ಬೆಂಬಲ ಬೆಲೆ ಖರೀದಿಗೆ ಪ್ರೋತ್ಸಾಹಕ್ಕಾಗಿ 140 ಕೋಟಿ ರೂ.: ಶಿವಾನಂದ ಪಾಟೀಲ್
  • whatsapp icon

ಬೆಂಗಳೂರು: ರಾಜ್ಯ ಸರಕಾರ ತೊಗರಿ ಬೆಳೆಗಾರರ ಹಿತ ರಕ್ಷಣೆಗಾಗಿ ಬೆಂಬಲ ಬೆಲೆ ಖರೀದಿ ಯೋಜನೆಗೆ ಪ್ರೋತ್ಸಾಹಧನಕ್ಕಾಗಿ 140 ಕೋಟಿ ರೂ. ಒದಗಿಸಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಸೋಮವಾರ ವಿಧಾನಸಭೆಗೆ ತಿಳಿಸಿದರು.

ಶೂನ್ಯ ವೇಳೆಯಲ್ಲಿ ಜೆಡಿಎಸ್‌ನ ಸುರೇಶ್‌ ಬಾಬು ಅವರು ತೊಗರಿ ಬೆಳೆಗಾರರ ಪ್ರತಿಭಟನೆ ಬಗ್ಗೆ ಪ್ರಸ್ತಾಪಿಸಿದಾಗ, ರಾಜ್ಯ ಸರಕಾರ ಪ್ರತಿ ಕ್ವಿಂಟಲ್‌ಗೆ 450 ರೂ. ಪ್ರೋತ್ಸಾಹ ಧನ ಘೋಷಣೆ ಮಾಡಿದೆ. ಇದೇ ಕಾರಣಕ್ಕೆ 140 ಕೋಟಿ ರೂ. ಮೀಸಲಿಟ್ಟಿದೆ ಎಂದರು.

ತೊಗರಿ ಬೆಂಬಲ ಬೆಲೆಯಲ್ಲಿ ಈಗಾಗಲೇ ಖರೀದಿ ಪ್ರಕ್ರಿಯೆ ಆರಂಭವಾಗಿದೆ ಎಂದು ತಿಳಿಸಿದರು. ಬೆಳೆ ಹಾನಿ ವಿಷಯ ಕೃಷಿ ಸಚಿವರ ವ್ಯಾಪ್ತಿಗೆ ಬರಲಿದೆ. ಈ ಬಗ್ಗೆ ಕೃಷಿ ಸಚಿವರು ಉತ್ತರ ನೀಡಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News