ರಾಜ್ಯ ವಕ್ಫ್ ಮಂಡಳಿ ಚುನಾವಣೆ : ನಾಳೆ (ನ.19) ಮತದಾನ
ಬೆಂಗಳೂರು : ರಾಜ್ಯ ವಕ್ಫ್ ಮಂಡಳಿಯ ಮುತವಲ್ಲಿ ಕೋಟಾದ ಎರಡು ಸ್ಥಾನಗಳಿಗೆ ಮಂಗಳವಾರ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ಮತದಾನ ನಡೆಯಲಿದೆ. ಈಗಾಗಲೇ, ಸಂಸದ, ಶಾಸಕಾಂಗ ಹಾಗೂ ಬಾರ್ ಕೌನ್ಸಿಲ್ ಕೋಟಾದಲ್ಲಿ ಅವಿರೋಧ ಆಯ್ಕೆಯಾಗಿದೆ.
ಮುತವಲ್ಲಿ ವಿಭಾಗದ ಎರಡು ಸ್ಥಾನಗಳಿಗೆ ಗುಲ್ಬರ್ಗಾದ ಸೈಯದ್ ಮುಹಮ್ಮದ್ ಅಲಿ ಹುಸೇನಿ, ಚಿಕ್ಕಮಗಳೂರಿನ ನಸೀರ್ ಅಹ್ಮದ್, ಚಿತ್ರದುರ್ಗದ ಅನ್ವರ್ ಬಾಷಾ ಹಾಗೂ ದಾದಾಪೀರ್, ಬೆಂಗಳೂರಿನ ಸರ್ವರ್ ಬೇಗ್ ಹಾಗೂ ಮುಹಮ್ಮದ್ ಝಿಯಾವುದ್ದೀನ್ ಸ್ಪರ್ಧಿಸಿದ್ದಾರೆ.
ಬೆಂಗಳೂರು, ಬೆಳಗಾವಿ, ಗುಲ್ಬರ್ಗಾ ಹಾಗೂ ಮೈಸೂರಿನಲ್ಲಿ ಚುನಾವಣೆ ನಡೆಯಲಿದೆ. ವಾರ್ಷಿಕ ಆದಾಯ ಒಂದು ಲಕ್ಷ ರೂ.ಗಳಿಗಿಂತ ಹೆಚ್ಚಿರುವಂತಹ ವಕ್ಫ್ ಸಂಸ್ಥೆಗಳ ಮುತವಲ್ಲಿಗಳು ಈ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು ಹೊಂದಿರುತ್ತಾರೆ. ನ.21ರಂದು ಬೆಂಗಳೂರಿನಲ್ಲಿ ಮತಗಳ ಏಣಿಕೆ ಕಾರ್ಯ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ.
ಅವಿರೋಧ ಆಯ್ಕೆ :
ರಾಜ್ಯ ವಕ್ಫ್ ಮಂಡಳಿಯಲ್ಲಿ ಸಂಸದರ ವಿಭಾಗದಿಂದ ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸಿರ್ ಹುಸೇನ್, ಶಾಸಕಾಂಗ ವಿಭಾಗದಿಂದ ಎನ್.ಎ.ಹಾರಿಸ್, ಕನೀಝ್ ಫಾತಿಮಾ, ರಾಜ್ಯ ಬಾರ್ ಕೌನ್ಸಿಲ್ನಿಂದ ಆರ್.ಅಬ್ದುಲ್ ರಿಯಾಝ್ ಖಾನ್, ಆಸಿಫ್ ಸೇಠ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮುತವಲ್ಲಿ ಮತದಾರರ ವಿವರ :
ಬೆಂಗಳೂರು ನಗರ-51, ಬೆಂಗಳೂರು ಗ್ರಾಮಾಂತರ-15, ರಾಮನಗರ-17, ಕೋಲಾರ-8, ಚಿಕ್ಕಬಳ್ಳಾಪುರ-11, ತುಮಕೂರು-15, ಚಿತ್ರದುರ್ಗ-50, ದಾವಣಗೆರೆ-40, ಶಿವಮೊಗ್ಗ-49, ಮೈಸೂರು-38, ಮಂಡ್ಯ-10, ಹಾಸನ-20, ಚಿಕ್ಕಮಗಳೂರು-48, ಮಂಗಳೂರು-41, ಉಡುಪಿ-14, ಕೊಡಗು-20, ಚಾಮರಾಜನಗರ-14, ಬೆಳಗಾವಿ-59, ಧಾರವಾಡ-34, ವಿಜಾಪುರ-111, ಬಾಗಲಕೋಟೆ-33, ಕಾರವಾರ-15, ಹಾವೇರಿ-78, ಗದಗ-17, ಕಲಬುರಗಿ-81, ಬೀದರ್-19, ರಾಯಚೂರು-16, ಕೊಪ್ಪಳ-13, ಬಳ್ಳಾರಿ-55, ವಿಜಯನಗರ-27 ಹಾಗೂ ಯಾದಗಿರಿ ಜಿಲ್ಲೆಯಲ್ಲಿರುವ 30 ವಕ್ಫ್ ಸಂಸ್ಥೆಗಳ ಮುತವಲ್ಲಿಗಳು ತಮ್ಮ ಹಕ್ಕು ಚಲಾಯಿಸಲಿದ್ದಾರೆ.