ರಾಯಚೂರು | ಪೊಲೀಸರಿಂದ ಹಲ್ಲೆಗೊಳಗಾಗಿ ವ್ಯಕ್ತಿ ಮೃತ್ಯು ಆರೋಪ; ಸಿಪಿಐ, ಪಿಎಸ್ಐ ಅಮಾನತು

Update: 2025-04-02 15:47 IST
ರಾಯಚೂರು | ಪೊಲೀಸರಿಂದ ಹಲ್ಲೆಗೊಳಗಾಗಿ ವ್ಯಕ್ತಿ ಮೃತ್ಯು ಆರೋಪ; ಸಿಪಿಐ, ಪಿಎಸ್ಐ ಅಮಾನತು

ಇಬ್ಬರು ಪೊಲೀಸರು ಅಮಾನತು

  • whatsapp icon

ರಾಯಚೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದಾಖಲಾದ ದೂರಿನ ಮೇರೆಗೆ ಪೊಲೀಸರು ಠಾಣೆಗೆ ವಿಚಾರಣೆಗೆಂದು ಕರೆಸಿ, ಹಲ್ಲೆ ನಡೆಸಿದ ಪರಿಣಾಮ ವ್ಯಕ್ತಿಯೊರ್ವ ಮೃತಪಟ್ಟಿರುವ ಆರೋಪ ಕೇಳಿ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಚೂರು ಪಶ್ಚಿಮ ಪೊಲೀಸ್ ಠಾಣೆಯ ಸಿಪಿಐ ನಾಗರಾಜ ಮೆಕಾ, ಪಿಎಸ್ಐ ಮಂಜುನಾಥ ಅವರನ್ನು ಎಸ್.ಪಿ.ಪುಟ್ಟಮಾದಯ್ಯ ಅವರು ಅಮಾನತುಗೊಳಿಸಿದ್ದಾರೆ.

ನಗರದ ಈಶ್ವರನಗರದ ನಿವಾಸಿ ವಿರೇಶ್‌ ಎಂಬವರ ಸಾವಿಗೆ ಪಶ್ಚಿಮ ಪೊಲೀಸ್ ಠಾಣೆಯ ಸಿಪಿಐ ನಾಗರಾಜ ಮೇಕಾ ಮತ್ತು ಪಿಎಸ್‌ಐ ಮಂಜುನಾಥ ಕಾರಣ ಎಂದು ಮೃತನ ಸಹೋದರಿ ನೀಡಿದ ದೂರಿನ ಮೇರೆಗೆ ಇಬ್ಬರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಘಟನೆಗೆ ಕಾರಣರಾದ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಶಾಸಕ ಡಾ.ಶಿವರಾಜ ಪಾಟೀಲ್ ಅವರು ಮೃತನ ಕುಟುಂಬಸ್ಥರೊಂದಿಗೆ ಎಸ್ಪಿ ಕಚೇರಿ ಮುಂದೆ ಮಂಗಳವಾರ ರಾತ್ರಿ ಪ್ರತಿಭಟನೆ ನಡೆಸಿದ್ದರು. ಘಟನೆಯನ್ನು ತನಿಖೆ ಒಳಪಡಿಸಲಾಗಿದ್ದು, ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಿ ಕೇಂದ್ರ ಸ್ಥಾನ ಬಿಡದಂತೆ ಸೂಚಿಸಿದ್ದಾರೆ.

ಅಲ್ಲದೇ, ಸಂತ್ರಸ್ತ ವ್ಯಕ್ತಿ ಪರಿಶಿಷ್ಟ ಪಂಗಡಕ್ಕೆ ಸೇರಿದ್ದರಿಂದ ವಿಚಾರಣೆ ಮಾಡುವ ವೇಳೆ ಸಿಪಿಐ ನಾಗರಾಜ ಹಾಗೂ ಪಿಎಸ್‌ಐ ಮಂಜುನಾಥ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಅಟ್ರಾಸಿಟಿ ಹಾಗೂ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News