ಬಸವಪರ ಸಂಘಟನೆಗಳ ಆಕ್ರೋಶ ಹಿನ್ನೆಲೆ : ಆರೆಸ್ಸೆಸ್‍ನ ‘ವಚನ ದರ್ಶನ’ ಪುಸ್ತಕ ಬಿಡುಗಡೆಗೆ ಲಿಂಗಾಯತ ಸ್ವಾಮೀಜಿ ಗೈರು

Update: 2024-08-20 16:33 GMT

ಶಿವಾನುಭನ ಶಿವರುದ್ರ ಸ್ವಾಮೀಜಿ 

ಬೆಂಗಳೂರು : ಆರೆಸ್ಸೆಸ್ ಸಹಯೋಗದೊಂದಿಗೆ ಹೊರತಂದಿರುವ ‘ವಚನ ದರ್ಶನ’ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬಸವಪರ ಸಂಘಟನೆಗಳಿಂದ ಭಾರೀ ಖಂಡನೆ ವ್ಯಕ್ತವಾದ ಹಿನ್ನೆಲೆ ಬೇಲಿಮಠ ಮಹಾಸಂಸ್ಥಾನದ ಶಿವಾನುಭನ ಶಿವರುದ್ರ ಸ್ವಾಮೀಜಿ ಗೈರಾಗಿದ್ದಾರೆ.

ಮಂಗಳವಾರ ಸಂಜೆ ಇಲ್ಲಿನ ರೇಸ್‍ಕೋರ್ಸ್ ರಸ್ತೆಯ ಭಾರತೀಯ ವಿದ್ಯಾಭವನದಲ್ಲಿ ‘ವಚನ ದರ್ಶನ’ ಪುಸ್ತಕ ಬಿಡುಗಡೆ ಅನ್ನು ಆರೆಸ್ಸೆಸ್ ಏರ್ಪಡಿಸಿತ್ತು.ಆದರೆ, ಇದಕ್ಕೂ ಮೊದಲು ಫ್ರೀಡಂ ಪಾರ್ಕಿನಲ್ಲಿ ವಿಶ್ವಗುರು ಬಸವಣ್ಣನವರ ಅನುಯಾಯಿಗಳ ಒಕ್ಕೂಟ ಬೃಹತ್ ಪ್ರತಿಭಟನೆ ನಡೆಸಿದ ಹಿನ್ನೆಲೆ ಬೇಲಿಮಠ ಮಹಾಸಂಸ್ಥಾನದ ಶಿವಾನುಭನ ಶಿವರುದ್ರ ಸ್ವಾಮೀಜಿ ಗೈರು ಕಂಡಿತು.

ಇನ್ನೂ, ಮುಖ್ಯ ಅತಿಥಿಗಳಾಗಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಎಂ.ಜಿ.ವೆಂಕಟೇಶ್ ಪಾಲ್ಗೊಂಡರೆ, ಆರೆಸ್ಸೆಸ್ ಸಹ ಕಾರ್ಯವಾಹಕ ಮುಕುಂದ ಸಿ.ಆರ್. ಭಾಷಣ ಮಾಡಿದರು.

ಕಾರ್ಯಕ್ರಮಕ್ಕೆ ಗೈರು ಆಗಿರುವ ಕುರಿತು ಪ್ರತಿಕ್ರಿಯಿಸಿದ ಬೇಲಿಮಠ ಮಹಾಸಂಸ್ಥಾನದ ಶಿವಾನುಭನ ಶಿವರುದ್ರ ಸ್ವಾಮೀಜಿ, ಬೇರೆ ಕರ್ಯಕ್ರಮ ಇರುವುದರಿಂದ ಪುಸ್ತಕದ ಬಿಡುಗಡೆಗೆ ಹೋಗುತ್ತಿಲ್ಲ ಎಂದು ತಿಳಿಸಿದರು.

ಆಕ್ರೋಶ: ವಚನ ಸಾಹಿತ್ಯ ನಾಶಪಡಿಸುವ ಉದ್ದೇಶದಿಂದ ಪ್ರಜ್ಞಾಪ್ರವಾಹ ಸಂಸ್ಥೆ ಪ್ರಕಟಿಸಿರುವ ‘ವಚನ ದರ್ಶನ’ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ವಿಶ್ವಗುರು ಬಸವಣ್ಣನವರ ಅನುಯಾಯಿಗಳ ಒಕ್ಕೂಟ ಬೃಹತ್ ಪ್ರತಿಭಟನೆ ನಡೆಸಿತು.

ಫ್ರೀಡಂ ಪಾರ್ಕಿನ ಮೈದಾನದಲ್ಲಿ ಜಮಾಯಿಸಿದ ಒಕ್ಕೂಟದ ಸದಸ್ಯರು, ವಚನ ದರ್ಶನ ಪುಸ್ತಕದ ಮುಖಪುಟದಲ್ಲಿ ಬಸವಣ್ಣ ಅವರ ಭಾವಚಿತ್ರವನ್ನು ವಿರೂಪವಾಗಿ ಬಿಂಬಿಸಿದ್ದು, ಅದರಲ್ಲಿ ಬಸವಾದಿ ಶರಣರ ಕುರುಹುಗಳಿಲ್ಲದೆ ಕೇಶಶಿಖಾ ಧ್ಯಾನಾಸಕ್ತ ಭಂಗಿಯ ವಟು, ಬಿಲ್ಲು ಬಾಣ, ತುಳಸಿಕಟ್ಟೆ ಚಿತ್ರಿಸಲಾಗಿದೆ ಎಂದು ಆರೋಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News