ಮಾರಕಾಸ್ತ್ರ ಹಿಡಿದು ಸಾರ್ವಜನಿಕರಿಗೆ ಬೆದರಿಕೆ; ಆರೋಪಿಯ ಬಂಧನ

Update: 2024-01-15 15:06 IST
ಮಾರಕಾಸ್ತ್ರ ಹಿಡಿದು ಸಾರ್ವಜನಿಕರಿಗೆ ಬೆದರಿಕೆ; ಆರೋಪಿಯ ಬಂಧನ
  • whatsapp icon

ಬೆಂಗಳೂರು: ಮಾರಕಾಸ್ತ್ರ ಹಿಡಿದು ಸಾರ್ವಜನಿಕರಿಗೆ ಬೆದರಿಕೆ ಒಡ್ಡಿದ್ದ ಆರೋಪಿಯನ್ನು ವೈಟ್ ಫೀಲ್ಡ್‌ ಪೊಲೀಸರು ಸೋಮವಾರ ಬಂಧಿಸಿದ್ದಾರೆ.  

ಆರೋಪಿಯನ್ನು ವರ್ತೂರು ನಿವಾಸಿ ಮುತ್ತು ಮುರಳಿ ಎಂದು ಗುರುತಿಸಲಾಗಿದೆ. ಆರೋಪಿಯು ರವಿವಾರ ತನ್ನ ಪಕ್ಕದ ಮನೆಯ ರಾಜಪ್ಪ ರವರ ಕುಟುಂಬದವರ ಜತೆ  ಗಲಾಟೆ ಮಾಡಿ ಮಾರಕಾಸ್ತ್ರವನ್ನು ಹಿಡಿದು ಬೆದರಿಕೆ ಒಡ್ಡಿದ್ದ ಎಂದು ಆರೋಪಿಸಲಾಗಿದೆ.

ಆರೋಪಿಯನ್ನು ವಶಕ್ಕೆ ಪಡೆದು  ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News