ಬೆಂಗಳೂರು | ಉದ್ಯಮಿಗೆ ಹನಿಟ್ರ್ಯಾಪ್; ಶಿಕ್ಷಕಿ, ರೌಡಿ ಸಹಿತ ಮೂವರ ಬಂಧನ
Update: 2025-04-02 00:30 IST
ಸಾಂದರ್ಭಿಕ ಚಿತ್ರ | PC : freepik.com
ಬೆಂಗಳೂರು : ಉದ್ಯಮಿಯೊಬ್ಬರನ್ನು ಹನಿಟ್ರ್ಯಾಪ್‌ಗೆ ಬೀಳಿಸಿ ಅವರಿಂದ ಲಕ್ಷಾಂತರ ರೂ. ಸುಲಿಗೆ ಮಾಡಿದ್ದ ಆರೋಪದಡಿ ಶಿಕ್ಷಕಿ ಹಾಗೂ ರೌಡಿಶೀಟರ್ ಸಹಿತ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಶಿಕ್ಷಕಿ ಶ್ರೀದೇವಿ ರೂಡಗಿ (25), ಆಕೆಯ ಪ್ರಿಯಕರ ಸಾಗರ್ ಮೋರೆ (28) ಹಾಗೂ ರೌಡಿ ಶೀಟರ್ ಗಣೇಶ್ ಕಾಳೆ (38) ಎಂಬವನನ್ನು ಬಂಧಿಸಲಾಗಿದ್ದು, ಮೂವರು ಆರೋಪಿಗಳು ವಿಜಯಪುರ ಮೂಲದವರು ಎಂದು ತಿಳಿದುಬಂದಿದೆ.
ಸುಲಿಗೆ ಸಂಬಂಧ 34 ವರ್ಷದ ಉದ್ಯಮಿ ರಾಜೇಶ್ ನೀಡಿದ್ದ ದೂರಿನನ್ವಯ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿ ರೌಡಿ ಗಣೇಶ್ ಕಾಳೆಯ ವಿರುದ್ಧ ವಿವಿಧ ಠಾಣೆಗಳಲ್ಲಿ ಸುಲಿಗೆ, ಕೊಲೆಯತ್ನ ಸಹಿತ 9 ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.