ಆಸ್ತಿಯ ಹಕ್ಕಿನಲ್ಲಿ ದೇಶದ ಎಲ್ಲ ಮಹಿಳೆಯರು ಸಮಾನರು : ಹೈಕೋರ್ಟ್
Update: 2025-04-06 00:00 IST
ಬೆಂಗಳೂರು : ಆಸ್ತಿಯ ಹಕ್ಕಿನಲ್ಲಿ ಹಿಂದೂ ಮಹಿಳೆಯರಿಗೆ ಪುರುಷರಷ್ಟೇ ಸಮಾನ ಅಧಿಕಾರವಿದೆ. ಆದರೆ ಮುಸ್ಲಿಮ್ ಮಹಿಳೆಯರಿಗೆ ಮಹಮ್ಮದೀಯ ಕಾನೂನಿನಲ್ಲಿ ಸರಿಸಮಾನವಾದ ಪಾಲು ನೀಡಿಲ್ಲ. ಆದರೆ ದೇಶದ ಎಲ್ಲ ಹೆಣ್ಣು ಮಕ್ಕಳೂ ಸಮಾನರು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಮುಸ್ಲಿಮ್ ಮಹಿಳೆಯರಿಗೆ ಆಸ್ತಿಯಲ್ಲಿ ಪುರುಷರ ಸಮಾನ ಪಾಲಿಲ್ಲದ ಹಿನ್ನೆಲೆಯಲ್ಲಿಏಕರೂಪ ನಾಗರಿಕ ಸಂಹಿತೆ ಜಾರಿಗೆ ಹೈಕೋರ್ಟ್ ಸಲಹೆ ನೀಡಿದೆ.
ಮುಸ್ಲಿಮ್ ಕುಟುಂಬದ ಆಸ್ತಿ ವಿಭಾಗ ದಾವೆಯ ತೀರ್ಪಿ ನೀಡುವ ವೇಳೆ ಹೈಕೋರ್ಟ್ ನ್ಯಾಯಮೂರ್ತಿ ಹಂಚಾಟೆ ಸಂಜೀವ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.
ಸಂವಿಧಾನದ ಆರ್ಟಿಕಲ್ 44 ರಲ್ಲಿ ಏಕರೂಪ ನಾಗರಿಕ ಸಂಹಿತೆ ಪ್ರಸ್ತಾಪವಿದೆ. ಜಾರಿಗೆ ತಂದರೆ ಮುಸ್ಲಿಮ್ ಮಹಿಳೆಯರಿಗೂ ಸಮಾನ ನ್ಯಾಯ ಸಿಗಲಿದೆ ಎಂದು ಮುಸ್ಲಿಮ್ ಕುಟುಂಬದ ಆಸ್ತಿ ವಿಭಾಗ ದಾವೆಯ ತೀರ್ಪಿನ ವೇಳೆ ನ್ಯಾಯಮೂರ್ತಿ ಹಂಚಾಟೆ ಸಂಜೀವ್ ಕುಮಾರ್ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.