ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಶ್ವಕಪ್‌ ಕ್ರಿಕೆಟ್‌; ʼನಮ್ಮ ಮೆಟ್ರೊʼ ರೈಲಿನಲ್ಲಿ ಪೇಪರ್ ಟಿಕೆಟ್‌

Update: 2023-10-19 05:08 GMT

ಸಾಂದರ್ಭಿಕ ಚಿತ್ರ

ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಶ್ವಕಪ್‌ ಪಂದ್ಯಾವಳಿ ನಡೆಯಲಿರುವ ಹಿನ್ನೆಲೆಯಲ್ಲಿ ಮೆಟ್ರೋ ಪ್ರಯಾಣಿಕರಿಗೆ 'ರಿಟರ್ನ್‌ ಜರ್ನಿ' ಪೇಪರ್‌ ಟಿಕೆಟ್‌ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ನಗರದಲ್ಲಿ ಅಕ್ಟೋಬರ್‌ 20, ಅ. 26, ನವೆಂಬರ್‌ 4, ನ. 9 ಮತ್ತು ನ. 12ರಂದು ಕ್ರಿಕೆಟ್‌ ಪಂದ್ಯಗಳು ನಡೆಯಲಿವೆ. ಆ ದಿನಗಳಲ್ಲಿ ಕಬ್ಬನ್‌ ಪಾರ್ಕ್ ಮತ್ತು ಎಂ.ಜಿ.ರಸ್ತೆ ನಿಲ್ದಾಣಗಳಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಸಂಜೆ 4ರ ನಂತರ ಒಮ್ಮೆ ಪ್ರಯಾಣಿಸಲು 'ರಿಟರ್ನ್‌ ಜರ್ನಿ' ಪೇಪರ್‌ ಟಿಕೆಟ್‌ ಬಳಸಬಹುದು.

ಕಾಗದದ ಟಿಕೆಟ್ ಬೆಲೆ 50 ರೂ. ಆಗಿರುತ್ತದೆ. ಸಾಮಾನ್ಯ ದರದ ಶೇ 5 ರಷ್ಟು ರೀಯಾಯಿತಿ QR ಕೋಡ್ ಟಿಕೆಟ್ ಗಳನ್ನು ಖರೀದಿಸಿದರೆ ಪಂದ್ಯಗಳು ನಡೆಯುವ ದಿನಗಳಲ್ಲಿ ಆದಿನದಂದು ಪುಯಾಣಿಸಲು ಮಾನ್ಯವಾಗಿರುತ್ತದೆ. ಕ್ಕೂ ಆ‌ ಟಿಕೆಟ್ ಗಳನ್ನು ವಾಟ್ಸ್ ಅಪ್ ಅಥವಾ ನಮ್ಮ ಮೆಟ್ರೋ ಆಪ್ ಇಲ್ಲವೇ ಪೆಟಿಎಂ ಮೂಲಕ ಕ್ರಿಕೆಟ್ ಪಂದ್ಯಾವಳಿಗಳು ಪ್ರಾರಂಭವಾಗುವ ಮೊದಲು ಮುಂಗಡವಾಗಿ ಖರೀದಿಸಿದರೆ ಯಾವುದೇ ಅಡಚಣೆ ಇಲ್ಲದೆ ಹಿಂದಿರುಗುವ ಪ್ರಯಾಣಕ್ಕೆ ಬಳಸಬಹುದು ಎಂದು ಬಿಎಂಆರ್‌ಸಿಎಲ್‌ ಹೇಳಿದೆ.

ಎಂದಿನಂತೆ ಸ್ಮಾರ್ಟ್ ಕಾರ್ಡ್ ಮತ್ತು ಏನ್.ಸಿ.ಎಂ.ಸಿ. ಕಾರ್ಡ ಗಳನ್ನು ಉಪಯೋಗಿಸಬಹುದು. ಪುಯಾಣಿಕರು ಈ ಅವಕಾಶವನ್ನು ಉಪಯೋಗಿಸಿಕೂಳ್ಳುವ ಮೂಲಕ ಕಬ್ಬನ್ ಪಾರ್ಕ್ ಮತ್ತು ಎಂ.ಜಿ ರಸ್ತೆಯ ಮೆಟ್ರೋ ಟಿಕೆಟ್ ಕೌಂಟರ್ ಗಳಲ್ಲಿ ಜನ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯಕಾರಿಯಾಗಲಿದೆ ಎಂದು ಬಿಎಂಆರ್‌ಸಿಎಲ್‌ ಪ್ರಕಟನೆ ತಿಳಿಸಿದೆ.




 


Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News