‘ಉತ್ತರ ಕರ್ನಾಟಕ’ದ ಚರ್ಚೆ, ವಕ್ಫ್ ಮಂಡಳಿ ಕುರಿತು ಉತ್ತರ ನೀಡಲು ಸರಕಾರ ಸಿದ್ಧ: ಸಿಎಂ ಸಿದ್ದರಾಮಯ್ಯ

Update: 2024-12-16 10:17 GMT

ಬೆಳಗಾವಿ, ಡಿ.16: ವಕ್ಫ್ ಮಂಡಳಿ ಕುರಿತು ಸರಕಾರ ವಿಧಾನ ಮಂಡಲದಲ್ಲಿ ಉತ್ತರ ನೀಡಬೇಕಿದೆ. ಸರ್ಕಾರ ಉತ್ತರ ಕರ್ನಾಟಕದ ಚರ್ಚೆಗೂ ಸಿದ್ಧವಿದೆ. ವಕ್ಫ್ ಮಂಡಳಿ ಕುರಿತ ವಿಪಕ್ಷಗಳ ಪ್ರಶ್ನೆಗಳಿಗೂ ಉತ್ತರ ನೀಡಲೂ ಸಿದ್ಧವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಬೆಳಗಾವಿಯ ಸರ್ಕ್ಯೂಟ್ ಹೌಸ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

"ವಕ್ಫ್ ಮಂಡಳಿ ಆಸ್ತಿ ಕಬಳಿಕೆ ಕುರಿತಂತೆ ಮೌನ ವಹಿಸಲು ಶಾಸಕ ಬಿ.ವೈ.ವಿಜಯೇಂದ್ರ ತಮಗೆ 150 ಕೋಟಿ ರೂ.ಗಳ ಆಮಿಷವೊಡ್ಡಿದ್ದರು" ಎಂದು ಅನ್ವರ್ ಮಾಣಿಪ್ಪಾಡಿ ಈ ಹಿಂದೆ ಮಾಡಿದ್ದ ಆರೋಪವನ್ನು ಇದೀಗ ನಿರಾಕರಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ, ಮಾಣಿಪ್ಪಾಡಿಯವರೇ ವಿಜಯೇಂದ್ರ ಆಮಿಷ ಒಡ್ಡಿದ್ದರು ಎಂದು ಸ್ವತಃ ಹಿಂದೆ ಹೇಳಿರುವುದರ ಮೇಲೆ ಆಧಾರದಲ್ಲಿ ನಾವು ಪ್ರತಿಕ್ರಿಯೆ ನೀಡಿದ್ದೇವೆ. ಅವರೇ ಸುದ್ದಿಗೋಷ್ಠಿ ಕರೆದು ನೀಡಿರುವ ಹೇಳಿಕೆಗೆ ನನ್ನ ಪ್ರಕಾರ ಪ್ರತಿಕ್ರಿಯೆ ನೀಡಿರುವುದು ಸರಿಯಾಗಿದೆ. ಈಗ ಬಹಳ ವರ್ಷಗಳ ನಂತರ ಹೇಳಿಲ್ಲ ಎನ್ನುತ್ತಿದ್ದಾರೆ. ಅದಕ್ಕೆ ಏನು ಮಾಡಬೇಕು ಎಂದು ನೀವೇ ಹೇಳಿ ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದರು.

ಯಾರು ಇತ್ಯರ್ಥ ಮಾಡಿಲ್ಲವೋ ಅವರು ಕ್ಷಮೆ ಕೇಳಲಿ

ಪ್ರಹ್ಲಾದ್ ಜೋಶಿ ಅವರು ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2ಎ ಮೀಸಲಾತಿಗೆ ಸಂಬಂಧಿಸಿ ನಡೆಯುತ್ತಿರುವ ಹೋರಾಟದಲ್ಲಿ ಆಗಿರುವ ಅವಘಡಕ್ಕಾಗಿ ಮುಖ್ಯಮಂತ್ರಿ ಕ್ಷಮೆ ಕೇಳಬೇಕು ಎಂದು ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಯಾರು ಸಮಸ್ಯೆ ಇತ್ಯರ್ಥ ಮಾಡಿಲ್ಲವೋ ಅವರೇ ಕ್ಷಮೆ ಕೇಳಲಿ ಎಂದು ಮುಖ್ಯಮಂತ್ರಿ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News