ಬಾಣಂತಿಯರ ಸಾವು ಪ್ರಕರಣ | ನಾವು ಜವಾಬ್ದಾರಿಯಿಂದ ನುಣುಚಿಕೊಳ್ಳುವುದಿಲ್ಲ : ದಿನೇಶ್‌ ಗುಂಡೂರಾವ್‌

Update: 2024-12-09 07:01 GMT

ದಿನೇಶ್‌ ಗುಂಡೂರಾವ್‌

ಬೆಳಗಾವಿ : "ಬಳ್ಳಾರಿ ಬಾಣಂತಿಯರ ಸಾವು ಪ್ರಕರಣ ಗಂಭೀರವಾದದ್ದು, ಸರಕಾರವೂ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದೆ. ಪ್ರತಿಪಕ್ಷಗಳು ಸದನದಲ್ಲಿ ಇದೇ ವಿಚಾರ ಪ್ರಸ್ತಾಪ ಮಾಡಬಹುದು, ಅದರ ಬಗ್ಗೆ ನಾವು ಸದನದಲ್ಲಿ ಉತ್ತರ ಕೊಡುತ್ತೇವೆ" ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

ಬೆಳಗಾವಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʼಬಾಣಂತಿಯರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಅಸಹಜವಾಗಿ ತೀರಿಕೊಂಡಿದದ್ದಾರೆಯೇ? ಅಥವಾ ನಿರ್ಲಕ್ಷ್ಯದಿಂದ ಏನಾದರೂ ಅವಘಡ ಸಂಭವಿಸಿದೆಯೇ ನೋಡಬೇಕು. ವ್ಯವಸ್ಥೆ ನೂರಕ್ಕೆ ನೂರರಷ್ಟು ಸರಿಯಿಲ್ಲ, ಅದನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದೇವೆ. ಈ ಬಗ್ಗೆ ತನಿಖೆಯಾಗುತ್ತಿದ್ದು, ನಾವು ಜವಾಬ್ದಾರಿಯಿಂದ ನುಣುಚಿಕೊಳ್ಳುವುದಿಲ್ಲʼ ಎಂದು ಅವರು ಸ್ಪಷ್ಟಪಡಿಸಿದರು.

ʼಪ್ರತಿಬಾರಿ ಇಲ್ಲಿ ಸದನ ನಡೆಯುತ್ತದೆ. ಸದನದಲ್ಲಿ ಈ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕು, ನಾವು ಅದರ ಬಗ್ಗೆಯೇ ಚರ್ಚೆಗೆ ತಯಾರಿದ್ದೇವೆ. ಏಕೆಂದರೆ ಇಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಸಮಸ್ಯೆಗಳ ಬಗ್ಗೆ ಚರ್ಚೆ ಆದರೆ ಪರಿಹಾರ ಸಿಗುತ್ತದೆ. ಗದ್ದಲ-ಗಲಾಟೆ ಆದರೆ ಏನೂ ಸಿಗುವುದಿಲ್ಲ, ನಾವು ಚರ್ಚೆಯಾಗಬೇಕೆಂಬುದನ್ನು ಬಯಸುತ್ತೇವೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News