ಇಲಾಖೆ ವರ್ಗಾವಣೆಯಲ್ಲಿ ಭ್ರಷ್ಟಾಚಾರ ನಡೆದಿಲ್ಲ: ಅಬಕಾರಿ ಸಚಿವ ತಿಮ್ಮಾಪುರ
ಬೆಳಗಾವಿ (ಸುವರ್ಣ ವಿಧಾನಸೌಧ) : ಅಬಕಾರಿ ಇಲಾಖೆಯ ವರ್ಗಾವಣೆಯಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ ನಡೆದಿಲ್ಲ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಸ್ಪಷ್ಟಪಡಿಸಿದ್ದಾರೆ.
ಗುರುವಾರ ಪರಿಷತ್ತಿನಲ್ಲಿ ಸದಸ್ಯ ಕೆ.ಎಸ್.ನವೀನ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇಲಾಖೆಯಲ್ಲಿ 2023ರ ಡಿಸೆಂಬರ್‍ನಿಂದ ರಿಂದ 2024ರ ನವೆಂಬರ್ ವರೆಗೆ ಗ್ರೂಪ್ ಎ, ಬಿ ಮತ್ತು ಸಿ ವೃಂದದಲ್ಲಿ 336 ವರ್ಗಾವಣೆಯಾಗಿದ್ದು ಇದರಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ಪ್ರಸಕ್ತ ಆರ್ಥಿಕ ಸಾಲಿನ ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ emi premium ಮತ್ತು premium ಮದ್ಯದ ಸ್ಲಾಬ್‍ಗಳ ಮದ್ಯ ಮಾರಾಟದ ಪಾಲು ಶೇ.21.03 ರಷ್ಟು ಆಗಿರುತ್ತದೆ.
ಅಂದರೆ, emi premium ಮತ್ತು premium ಮದ್ಯದ ಬ್ರಾಂಡ್‍ಗಳ ಮಾರಾಟದಲ್ಲಿ ಶೇ.6.85ರಷ್ಟು ಹೆಚ್ಚಳವಾಗಿರುತ್ತದೆ. ಹಾಗಾಗಿ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ semi premium ಮತ್ತು premium ಬ್ರಾಂಡ್‍ಗಳ ಬಳಕೆ ಹೆಚ್ಚಾಗುವ ಮೂಲಕ ಮಾರಾಟ ಹೆಚ್ಚಳದಿಂದ ರಾಜಸ್ವ ಸಂಗ್ರಹಣೆಯಲ್ಲಿ ಧನಾತ್ಮಕ ಬೆಳವಣಿಗೆ ಕಂಡು ಅಂದಾಜಿಸಲಾಗಿದೆ ಎಂದು ಅವರು ತಿಳಿಸಿದರು.