ದೊಡ್ಡಿ-ತಾಂಡಾಗಳಿಗೆ ಅನಧಿಕೃತ ವಿದ್ಯುತ್ ಸಂಪರ್ಕ ಸಕ್ರಮ : ಸಚಿವ ಕೆ.ಜೆ.ಜಾರ್ಜ್

Update: 2024-12-19 12:52 GMT

ಬೆಳಗಾವಿ (ಸುವರ್ಣ ವಿಧಾನಸೌಧ) : ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ ಇರುವ ದೊಡ್ಡಿಗಳು ಹಾಗೂ ತಾಂಡಾಗಳಿಗೆ ಅನಧಿಕೃತ ವಿದ್ಯುತ್ ಸಂಪರ್ಕ ಪಡೆಯಲಾಗಿದ್ದು, ಈ ವಿದ್ಯುತ್ ಸಂಪರ್ಕವನ್ನು ಸಕ್ರಮಗೊಳಿಸಲು ಸೂಚಿಸಲಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.

ಗುರುವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ಸದಸ್ಯೆ ಕರೆಮ್ಮ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ದೇವದುರ್ಗ ತಾಲೂಕಿನಲ್ಲಿ 132 ದೊಡ್ಡಿಗಳ 792 ಮನೆಗಳು ಹಾಗೂ 26 ತಾಂಡಗಳ 373 ಮನೆಗಳಿಗೆ ನಿರಂತರ ಜ್ಯೋತಿ ಮಾರ್ಗಗಳ ಮೂಲಕ 24 ಗಂಟೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಸುಮಾರು 799 ಒಂಟಿ ಮನೆಗಳು ಹೊಲ ಮತ್ತು ಗದ್ದೆಗಳಲ್ಲಿ ನಿರ್ಮಿಸಿದ್ದು, ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆಯಲಾಗಿದೆ.

ಹಗಲಿನ ವೇಳೆಯಲ್ಲಿ ಈ ಮನೆಗಳಿಗೆ ಐಪಿ ಪೀಡರ್ ಮೂಲಕ ಅನಧಿಕೃತ ವಿದ್ಯುತ್ ಪಡೆಯಲಾಗಿದ್ದು, ಸಂಜೆ 6 ಗಂಟೆಯಿಂದ ಬೆಳಗಿನ ವರೆಗೆ ಸಿಂಗಲ್ ಫ್ಯೂಜ್ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಈ ಮನೆಗಳಿಗೆ ಎಸ್‍ಸಿ/ಎಸ್‍ಟಿ/ಟಿಎಸ್‍ಪಿ ಯೋಜನೆಯಡಿ ಅನುದಾನದ ಲಭ್ಯತೆ ಮೇರೆಗೆ ಹಂತ ಹಂತವಾಗಿ ಮೂಲಭೂತ ಸೌಕರ್ಯ ಕಲ್ಪಿಸಿ ವಿದ್ಯುತ್ ಸಂಪರ್ಕ ಅಧಿಕೃತಗೊಳಿಸಲಾಗುವುದು ಎಂದು ಅವರು ಹೇಳಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News