ಬಸವ ಕಲ್ಯಾಣ | ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ 9ನೇ ವಾರ್ಷಿಕ ಕುರ್ ಆನ್ ಪ್ರವಚನ ಕಾರ್ಯಕ್ರಮ
ಬೀದರ್ : ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ಡಿ.13, 14, 15ರಂದು 9ನೇ ವಾರ್ಷಿಕ ಕುರ್ ಆನ್ ಪ್ರವಚನ ಕಾರ್ಯಕ್ರಮವು ಬಸವಕಲ್ಯಾಣದ ಥೇರ್ ಮೈದಾನದಲ್ಲಿ ನಡೆಯಲಿದೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ಅಧ್ಯಕ್ಷ ಡಾ.ಬೆಳಗಾಮಿ ಮುಹಮ್ಮದ್ ಸಾದ್, ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ, ಪೌರಾಡಳಿತ ಸಚಿವ ರಹೀಮ್ ಖಾನ್, ಶಾಸಕ ಶರಣು ಸಲಗರ, ಶಾಸಕ ಡಾ.ಸಿದ್ದು ಪಾಟೀಲ್, ಬೀದರ್ ವಿಧಾನ ಪರಿಷತ್ ಸದಸ್ಯ ವಿಜಯ ಸಿಂಗ್, ಜಮಾಅತೆ ಇಸ್ಲಾಮೀ ಹಿಂದ್ ಉಪಾಧ್ಯಕ್ಷ ಇಂಜಿನಿಯರ್ ಪ್ರೊ.ಮುಹಮ್ಮದ್ ಸಲೀಮುದ್ಧೀನ್ ಸಾಹಬ್, ಹೀರೆಮಠ ಹಾರಕೊಡೆ ಸಂಸ್ಥಾನದ ಸ್ವಾಮೀಜಿ ಡಾ.ಚನ್ನವೀರ ಶೀವಚಾರ್ಯರು, ಅನುಭವ ಮಂಟಪ ಬಸವ ಕಲ್ಯಾಣದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದೇವರು, ಹಲಸೂರ ಗುರು ಬಸವೇಶ್ವರ ಸಂಸ್ಥಾನ ಮಠದ ಸ್ವಾಮೀಜಿ ಡಾ.ಶಿವಾನಂದ, ಭದಂತ ಧಮ್ಮನಾಗ ಮಹಾಥೇರೋ, ಹವಾ ಮಲ್ಲಿನಾಥ ಮಹರಾಜ ನಿರಗುಡಿ, ಬಸವಕಲ್ಯಾಣ ಗಡಿಮಠದ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಗುರುಕುಲ ಆಶ್ರಮ ತಡೋಳದ ರಾಜೇಶ್ವರ ಶಿವಾಚಾರ್ಯರು ಭಾಗವಹಿಸಲಿದ್ದಾರೆ.
ಕಲಬುರಗಿ ಜಮಾಅತೆ ಇಸ್ಲಾಮೀ ಹಿಂದ್ ವಿಭಾಗ ಸಂಚಾಲಕರು ಜನಾಬ್ ರಫೀಕ್ ಅಹ್ಮದ್ ಗಾದಗಿ, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಾಲಾ ಬಿ.ನಾರಾಯಣರಾವ, ವಿಧಾನ ಪರಿಷತ್ ಸದಸ್ಯೆ ಎಮ್.ಜಿ.ಮೂಳೆ, ಮಾಜಿ ಸಚಿವ ರಾಜಶೇಖರ್ ಬಿ.ಪಾಟೀಲ್, ಶಾಹೀನ್ ಗ್ರೂಪ್ ಆಫ್ ಇನ್ಸಿಟ್ಯೂಷನ್ಸ್ ಚೇರ್ಮೆನ್ ಡಾ.ಅಬ್ದುಲ್ ಖದೀರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಕುಂಟಿ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ದಿಲೀಪ್ ಬಂದೋಳೆ, ಅಪಾರ ಜಿಲ್ಲಾಧಿಕಾರಿ ಶಿವಕುಮಾರ್ ಶೀಲವಂತ, ಬಸವಕಲ್ಯಾಣ ಸಹಾಯಕ ಆಯುಕ್ತ ಮುಕುಲ್ ಜೈನ್, ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜಗನ್ನಾಥ್ ರೆಡ್ಡಿ, ಬಸವಕಲ್ಯಾಣ ತಹಶೀಲ್ದಾರ್ ದತ್ತಾತ್ರೇಯ ಜಿ.ಗಾದಾ, ಬಸವಕಲ್ಯಾಣದ ಇಓ ರಮೇಶ್ ಸೂಲ್ಕಿ, ಹಲಸೂರು ತಹಶೀಲ್ದಾರ್ ಶಿವಾನಂದ ಮೇತ್ರೆ, ಬಸವಕಲ್ಯಾಣ ಅರಣ್ಯ ಇಲಾಖೆಯ ಸಹಾಯಕ ಆಯುಕ್ತ ಮುಹಮ್ಮದ್ ಮುಜೀಬುದ್ದೀನ್ ಉಪಸ್ಥಿತರಿರುವರು.
ಡಿ.13ರಂದು ಮಾನವನ ಘನತೆ, ಡಿ.14ರಂದು ಮಹಿಳೆಯರ ಮತ್ತು ಮಕ್ಕಳ ಸಂರಕ್ಷಣೆ, ಡಿ.15 ರಂದು ಕೊನೆಯ ದಿನ ಜೀವನದ ಉದ್ದೇಶದ ಕುರಿತು ರಾಜ್ಯದ ಪ್ರಸಿದ್ಧ ಪ್ರವಚನಕಾರ ಮಂಗಳೂರಿನ ಜನಾಬ್ ಮುಹಮ್ಮದ್ ಕುಂಞ ಅವರು 3 ದಿನಗಳ ಕಾಲ ಪ್ರವಚನ ನಡೆಸಲಿದ್ದಾರೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಪ್ರಕಟನೆಯಲ್ಲಿ ತಿಳಿಸಲಾಗಿದೆ.