ಬೀದರ್ | ಚಿನ್ನಾಭರಣ ಕಳವು ಪ್ರಕರಣ : ಐವರು ಆರೋಪಿಗಳ ಬಂಧನ

Update: 2024-12-08 11:37 GMT

ಬೀದರ್ : ಬಸವಕಲ್ಯಾಣ ನಗರದಲ್ಲಿ ನಡೆದ ಲಕ್ಷಾಂತರ ರೂ. ಬೆಲೆಬಾಳುವ ಆಭರಣ ಕಳ್ಳತನದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 5 ಜನ ಆರೋಪಿಗಳನ್ನು ಬಂಧಿಸಿ 2 ಪಿಸ್ತೂಲ್ ಸೇರಿ ಒಡವೆ ಮತ್ತು ಹಣ ಜಪ್ತಿ ಮಾಡಿದ್ದಾರೆ.

ನಾಂದೇಡ್ ಸೂರಜ್ ಸಿಂಗ್ (ಸುರೇಂದ್ರ ಸಿಂಗ್) ಗಾಡಿವಾಲೆ (24), ರಾಧೇಶಾಮ್ ಭಾಲೆರಾವ (24), ಹೈದಾರಾಬಾದ್ ಮೂಲದ ಮುದ್ದಸೀರ್ ಹುಸ್ಸೆನ್ (24), ಮುಹಮ್ಮದ್ ಯುಸೂಫ್ (ಲಾಯಿಕ್) (21), ಬಸವಕಲ್ಯಾಣ ಮೂಲದ ಇಮ್ರಾನ್ ಮಿಯ್ಯಾ ಮಾಸೂಲ್ದಾರ್ (33) ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ.

ಬಸವಕಲ್ಯಾಣ ನಿವಾಸಿ ನಜಿಮೋದ್ದಿನ್ ನಾಯಕೊಡೆ ಅವರು, ಪಟ್ಟಣದ ಗಾಂಧಿ ಚೌಕ್ ಹತ್ತಿರ ಮದಿನಾ ಜ್ಯೂಲರ್ಸ್ ಅಂಗಡಿ ಇಟ್ಟುಕೊಂಡಿದ್ದು, ರಾತ್ರಿ ಸುಮಾರು 9:30 ಗಂಟೆಗೆ ಮೋಟಾರ್ ಸೈಕಲ್ ಮೇಲೆ ತನ್ನ ಮನೆಯ ಕಡೆಗೆ ಹೋಗುತ್ತಿದ್ದರು. ಮಾರ್ಗಮಧ್ಯದಲ್ಲಿ ಸಿಡಿಪಿಓ ಕಚೇರಿ ಹತ್ತಿರ ಕಾರಿನಲ್ಲಿ ಬಂದ ಅಪರಿಚಿತರು ಅವರ ಮೋಟಾರ್ ಸೈಕಲ್ ತಡೆದು, ಚಾಕು ಮತ್ತು ಪಿಸ್ತೂಲಿನಿಂದ ಹಲ್ಲೆ ಮಾಡಿ ಅವರ ಬ್ಯಾಗ್ನಲ್ಲಿದ್ದ 2,82,000 ರೂ. ಮೌಲ್ಯದ ಚಿನ್ನ, 17,800 ರೂ. ಮೌಲ್ಯದ ಬೆಳ್ಳಿ, 2,80,000 ರೂ. ಹಣ ಹೀಗೆ ಒಟ್ಟು 5,79,800 ರೂ. ಸುಲಿಗೆ ಮಾಡಿಕೊಂಡು ಹೋಗಿದ್ದರು. ಈ ಘಟನೆ ಬಗ್ಗೆ ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸ್ಥಳೀಯ ಪೊಲೀಸರು, ಮಹಾರಾಷ್ಟ್ರ ಪೊಲೀಸರೊಂದಿಗೆ ಜಂಟಿ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಾದ ಮುದಾಸಿರ್, ಸುರೇಂದ್ರ ಸಿಂಗ್ (ಸೂರಜ್ ಸಿಂಗ್) ಮತ್ತು ರಾಧೆಶಾಮ್ ಗೆ ದಸ್ತಗಿರಿ ಕೃತ್ಯಕ್ಕೆ ಬಳಸಿದ ಎರಡು ಪಿಸ್ತೂಲ್, 2,82,000 ರೂ. ಮೌಲ್ಯದ ಚಿನ್ನ ಮತ್ತು 17,800 ರೂ. ಮೌಲ್ಯದ ಬೆಳ್ಳಿ ವಶಕ್ಕೆ ಪಡೆಯಲಾಗಿದೆ. ಮುಹಮ್ಮದ್ ಯುಸೂಫ್ (ಲಾಯಿಕ್) ಹಾಗು ಇಮ್ರಾನ್ ಮಿಯ್ಯಾ ಎಂಬ ಆರೋಪಿಗಳನ್ನು ವಶಕ್ಕೆ ಪಡೆದು ಅವರಿಬ್ಬರಿಂದ 12,000 ರೂ. ಜಪ್ತಿ ಮಾಡಿಕೊಳ್ಳಲಾಗಿದೆ. ಇನ್ನೊಬ್ಬ ಆರೋಪಿಯು ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣವು ದಾಖಲಾಗಿ 14 ದಿನಗಳಲ್ಲಿ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಪೊಲೀಸರು ಕೃತ್ಯ ಭೇದಿಸಿರುವುದರಿಂದ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News