ಬೀದರ್ | ಕಳ್ಳತನ ಪ್ರಕರಣ : ಐವರ ಬಂಧನ

Update: 2024-12-08 13:43 GMT

ಬೀದರ್ : ಭಾಲ್ಕಿ ತಾಲೂಕಿನ ಧನ್ನೂರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಿ, 4 ಲಕ್ಷಕ್ಕೂ ಅಧಿಕ ನಗದು ಮತ್ತು ಒಂದು ಟಾಟಾ ಪಂಚ ಕಾರು ಜಪ್ತಿ ಮಾಡಲಾಗಿದೆ ಎಂದು ಎಸ್.ಪಿ ಪ್ರದೀಪ್ ಗುಂಟಿ ತಿಳಿಸಿದ್ದಾರೆ.

ರವಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಲಬರ್ಗಾ ಹತ್ತಿರ ಇರುವ ಸಿದ್ದೇಶ್ವರ ಪೆಟ್ರೋಲ್ ಬಂಕ್ ನಲ್ಲಿ ಜಮಾ ಆಗಿದ್ದ 4,96,640 ರೂ. ಹಣವನ್ನು ಜ್ಞಾನೇಶ್ವರ್ ಎಂಬಾತ ಬೀದರ್ ನ ಶಿವನಗರದ ಎಸ್.ಬಿ.ಐ ಬ್ಯಾಂಕ್ ಗೆ ಜಮಾ ಮಾಡಿ ಬರುವುದಾಗಿ ತೆರಳಿದ್ದ. ಬ್ಯಾಗಿನಲ್ಲಿ ಹಣ ತೆಗೆದುಕೊಂಡು ಹೋಗುವಾಗ ಭಾಲ್ಕಿ-ಬೀದರ್ ಮಾರ್ಗಮಧ್ಯದ ಶನಿಮಹಾತ್ಮ ಕಮಾನ ಹತ್ತಿರ ಕಾರಿನಲ್ಲಿ ಬಂದ ನಾಲ್ಕು ಜನ ಕಳ್ಳರು ಆತನಲ್ಲಿದ್ದ ಹಣವನ್ನು ದೋಚಿದ್ದರು.

ಸುಲಿಗೆ ಪ್ರಕರಣದ ಬೆನ್ನು ಹತ್ತಿದ ಧನ್ನೂರ್ ಪೊಲೀಸ್ ಠಾಣೆಯ ಪೊಲೀಸರು, ಶನಿವಾರ ಐದು ಜನ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲಾಗಿದೆ. ಆರೋಪಿಗಳಿಂದ 4 ಲಕ್ಷಕ್ಕೂ ಅಧಿಕ ನಗದು ಮತ್ತು ಒಂದು ಟಾಟಾ ಪಂಚ್ ಕಾರು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಅಧೀಕ್ಷಕ-1 ಮಹೇಶ್ ಮೇಘಣ್ಣನವರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ-2 ಚಂದ್ರಕಾಂತ ಪೂಜಾರಿ, ಭಾಲ್ಕಿಯ ಪೊಲೀಸ್ ಉಪಾಧೀಕ್ಷಕ ಶಿವಾನಂದ ಪಾವಡಶೆಟ್ಟಿ ರವರ ಮಾರ್ಗದರ್ಶನದಲ್ಲಿ ಪೊಲೀಸ್ ವೃತ್ತ ನೀರಿಕ್ಷ ಗುರುಪಾದ ಎಸ್.ಬಿರಾದರವರ ನೇತೃತ್ವದಲ್ಲಿ ಪಿಎಸ್ಐ ವಿಶ್ವರಾಧ್ಯ, ಸಿಪಿಸಿ ಹರ್ಷವರ್ಧನ, ಸಿಪಿಸಿ ಶಾಮರಾವ, ಸಿಪಿಸಿ ಪ್ರಶಾಂತರೆಡ್ಡಿ ಒಳಗೊಂಡ ತನಿಖಾ ತಂಡ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಪಾಲ್ಗೊಂಡ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಜಿಲ್ಲೆಯ ಪೊಲೀಸ್ ಅಧೀಕ್ಷಕರು ಪ್ರಶಂಸನೀಯ ವ್ಯಕ್ತಪಡಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News